Politics

*ಆಪರೇಷನ್ ಸಿಂಧೂರ: ಇಂದು ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ ಮೋದಿ*

ಪ್ರಗತಿವಾಹಿನಿ ಸುದ್ದಿ: ಪಾಕಿಸ್ತಾನಿ ಉಗ್ರರು ಪೆಹೆಲ್ಗಾಮ್ ದಾಳಿ ನಡೆಸಿದ ಬಳಿಕ ಅದರ ಪ್ರತೀಕಾರವಾಗಿ ನೂರಾರು ಉಗ್ರರನ್ನು ಭಾರತೀಯ ಸೇನೆ ಹೊಡೆದು ಹಾಕಿದೆ. ಇದರಿಂದ ಎರಡು ದೇಶಗಳ ನಡುವೆ ಯುದ್ಧ ನಡೆದು ಕದನ ವಿರಾಮ ಘೋಷಣೆ ಮಾಡಲಾಗಿದೆ. ಹಾಗಾಗಿ ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಲಿದ್ದಾರೆ.‌

ಆಫರೇಷನ್ ಸಿಂಧೂರದ ಬಳಿಕ ದೇಶದ ಜನರನ್ನು ಉದ್ದೇಶಿಸಿ ಇದುವರೆಗೂ ಪ್ರಧಾನಿ ಮೋದಿ ಮಾತನಾಡಿಲ್ಲ. ಆದ್ರೆ ಈಗ ಆ ಕ್ಷಣ ಸನಿಹವಾಗಿದೆ. ಇಂದು  ರಾತ್ರಿ 8 ಗಂಟೆಗೆ ದೇಶದ ಜನರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. 

Home add -Advt

ಆಪರೇಷನ್ ಸಿಂಧೂರದ ನಂತರ ಇದೇ ಮೊದಲ ಬಾರಿಗೆ ಮೋದಿ ಮಾತನಾಡಲಿದ್ದು, ಈ ಕುರಿತು ಏನು ಹೇಳಲಿದ್ದಾರೆ..? ಪಾಕಿಸ್ತಾನಕ್ಕೆ ಯಾವ ಸಂದೇಶ ರವಾನೆ ಮಾಡಲಿದ್ದಾರೆ..? ಕದನ ವಿರಾಮ ಜಾರಿಯಲ್ಲಿ ಇರುವುದರಿಂದ ಮುಂದೇನು..? ಆಪರೇಷನ್‌ ಸಿಂಧೂರ ಇಲ್ಲಿಗೆ ಸಮಾಪ್ತಿಯಾಯಿತಾ ಅಥವಾ ಮುಂದುವರೆಯಲಿದ್ಯಾ? ಎಂಬಿತ್ಯಾದಿ ಪ್ರಶ್ನೆಗಳು ದೇಶದ ಜನರ ಮುಂದಿದ್ದು ಈ ಬಗ್ಗೆ ಪ್ರಧಾನಿ ಮೋದಿ ಮಾತನಾಡುವ ನಿರೀಕ್ಷಿಯಿದೆ.

Related Articles

Back to top button