Latest
2 hours ago
*ಅಂಗನವಾಡಿ ಕೇಂದ್ರ ಅಭಿವೃದ್ಧಿ ಯೋಜನೆ ವಿಸ್ತರಣೆಗೆ ಟೊಯೋಟಾ ನಿರ್ಧಾರ*
ರಾಮನಗರ ಜಿಲ್ಲೆಯ 400 ಹೊಸ ಅಂಗನವಾಡಿ ಕೇಂದ್ರಗಳಿಗೆ ಪ್ರಯೋಜನ ಒದಗಿಸುವ ದ್ದೇಶದಿಂದ ಅಂಗನವಾಡಿ ಅಭಿವೃದ್ಧಿ ಯೋಜನೆ ವಿಸ್ತರಿಸಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರಗತಿವಾಹಿನಿ ಸುದ್ದಿ, ರಾಮನಗರ : ಸಮಾಜ ಸುಧಾರಣೆ ನಿಟ್ಟಿನಲ್ಲಿ ಸದಾ ಮುಂಚೂಣಿಯಲ್ಲಿ ನಿಂತು ಕಾರ್ಯ ನಿರ್ವಹಿಸುತ್ತಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಸಂಸ್ಥೆಯು ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ನಡೆಸುತ್ತಿರುವ ಟೊಯೋಟಾ ಅಂಗನವಾಡಿ ಅಭಿವೃದ್ಧಿ ಯೋಜನೆಯನ್ನು ವಿಸ್ತರಣೆ ಮಾಡುತ್ತಿರುವುದಾಗಿ ಘೋಷಿಸಿದೆ. ಆರಂಭಿಕ ಹಂತದಲ್ಲಿ 30 ಮಾದರಿ ಅಂಗನವಾಡಿ ಕೇಂದ್ರಗಳನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದ ಸಂಸ್ಥೆಯು ಆರ್ಥಿಕ 2023-24ರಲ್ಲಿ 150 ಕೇಂದ್ರಗಳನ್ನು ಅಭಿವೃದ್ಧಿಪಡಿಸಿತ್ತು. ಈ ಗೆಲುವಿನ ಹುಮ್ಮಸ್ಸಿನಲ್ಲಿ ಡಿಸೆಂಬರ್ 2024 ರಿಂದ ಮಾರ್ಚ್ 2026 ರವರೆಗೆ ರಾಮನಗರ ಜಿಲ್ಲೆಯ ಹೆಚ್ಚುವರಿ 400 ಅಂಗನವಾಡಿ ಕೇಂದ್ರಗಳನ್ನು ಅಭಿವೃದ್ಧಿ ಮಾಡುವುದಾಗಿ ಘೋಷಣೆ ಮಾಡಿದೆ. ಈ ಯೊಜನೆಯ ಭಾಗವಾಗಿ ಟಿಕೆಎಂ ಸಂಸ್ಥೆಯು ಜನವರಿ 3ರಂದು 400 ಅಂಗನವಾಡಿಯ ಕಾರ್ಯಕರ್ತೆಯರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ರಾಮನಗರದ ಜಿಲ್ಲಾ ಪಂಚಾಯತ್ ಸಿಇಒ ದಿಗ್ವಿಜಯ್ ಬೋಡ್ಕೆ ಐಎಎಸ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಎಸ್.ಸಿ.ಪದ್ಮರಾಜು ಹಾಜರಿದ್ದರು. ಈ ತರಬೇತಿ ಕಾರ್ಯಕ್ರಮದಲ್ಲಿ ಮಕ್ಕಳ ಬೆಳವಣಿಗೆಗೆ ಬೇಕಾದ ಆಧುನಿಕ ಶಿಕ್ಷಣ ತಂತ್ರಗಳು ಮತ್ತು ಸಾಧನಗಳ ಕುರಿತು ಶಿಕ್ಷಕರಿಗೆ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರಾಮನಗರದ ಜಿಲ್ಲಾ ಪಂಚಾಯತ್ ಸಿಇಓ ದಿಗ್ವಿಜಯ್ ಬೋಡ್ಕೆ ಐಎಎಸ್ ಅವರು, “ಟೊಯೋಟಾ ಅಂಗನವಾಡಿ ಅಭಿವೃದ್ಧಿ ಯೋಜನೆಯಂತಹ ಮಹತ್ವದ ಯೋಜನೆಯ ಮೂಲಕ ನಮ್ಮ ಜನರ ಕಲ್ಯಾಣಕ್ಕಾಗಿ ದುಡಿಯುತ್ತಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆಯ ಅಚಲ ಬದ್ಧತೆಗೆ ನಾವು ಮೆಚ್ಚುಗೆ ಸೂಚಿಸುತ್ತಿದ್ದೇವೆ. ಮಕ್ಕಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ಈ ಯೋಜನೆಯು ಅಂಗನವಾಡಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದಲ್ಲದೆ ಜಿಲ್ಲೆಯಾದ್ಯಂತ ಇರುವ ಅಂಗನವಾಡಿ ಶಿಕ್ಷಕರು ಮತ್ತು ಅಂಗನವಾಡಿ ಕೇಂದ್ರಗಳ ಬಲವರ್ಧನೆ ಮಾಡಲಿದೆ. ಟಿಕೆಎಂ, ಜಿಲ್ಲಾ ಪಂಚಾಯತ್, ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಜನ ಸಮುದಾಯಗಳ ನಡುವಿನ ಈ ಸಹಭಾಗಿತ್ವವು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಿಂದ ಹೇಗೆ ಅರ್ಥಪೂರ್ಣ ಬದಲಾವಣೆ ಸಾಧಿಸಬಹುದು ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ. ಈ ಯೋಜನೆಯ ಜೊತೆ ನಿಲ್ಲಲು ನಾವು ಹೆಮ್ಮೆಪಡುತ್ತೇವೆ ಮತ್ತು ರಾಮನಗರ ಜಿಲ್ಲೆಯ ಮಕ್ಕಳು ಮತ್ತು ಜನಜೀವನದಲ್ಲಿ ಬದಲಾವಣೆ ಉಂಟು ಮಾಡಲು ಎದುರು ನೋಡುತ್ತಿದ್ದೇವೆ” ಎಂದು ಹೇಳಿದರು.…
Karnataka News
3 hours ago
ಎಚ್ ಎಂ.ಪಿ.ವಿ ಬಗ್ಗೆ ಭಯ ಬೇಡ: ಸಿಎಂ ಸಿದ್ದರಾಮಯ್ಯ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಎಚ್ ಎಂ.ಪಿ. ವೈರಾಣು ಬಗ್ಗೆ ಸಾರ್ವಜನಿಕರು ಭಯಪಡಬೇಕಾದ ಅಗತ್ಯವಿಲ್ಲ. ಜಾಗರೂಕರಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.…
Politics
3 hours ago
*ರಾಯಣ್ಣ ಬ್ರಿಗೇಡ್ ಆಯ್ತು; ಈಗ ಕ್ರಾಂತಿ ವೀರ ಬ್ರಿಗೇಡ್ ಶುರು: ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೊಸ ಅಸ್ತ್ರ*
ನಾನು ಅಂದು ಹೇಳಿದ್ದು ಇಂದು ಬಿಜೆಪಿಯಲ್ಲಿ ಚರ್ಚೆ ಆಗ್ತಿದೆ! ಪ್ರಗತಿವಾಹಿನಿ ಸುದ್ದಿ: ಬಿಜೆಪಿಯಲ್ಲಿದ್ದುಕೊಂಡು ರಾಯಣ್ಣ ಬ್ರಿಗೇಡ್ ಆರಂಭಿಸಿ ಸಡ್ಡು ಹೊಡೆದಿದ್ದ…
Karnataka News
5 hours ago
*ಪತ್ರಕರ್ತರಿಗೆ ಗುಡ್ ನ್ಯೂಸ್: ಉಚಿತ ಬಸ್ ಪಾಸ್ ಆಯ್ಕೆ ಸಮಿತಿ ರಚನೆ ಮಾಡಿ ಸರ್ಕಾರ ಆದೇಶ*
ಪ್ರಗತಿವಾಹಿನಿ ಸುದ್ದಿ: ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲು ರಾಜ್ಯ ಮಟ್ಟದಲ್ಲಿ ಆಯ್ಕೆ ಸಮಿತಿಯನ್ನು ಸರ್ಕಾರ ರಚನೆ ಮಾಡಿ…
Politics
5 hours ago
*ತಾಯಂದಿರ ಮರಣ, ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ: ಅಧಿಕಾರಿಗಳಿಗೆ ಸಿಎಂ ಸೂಚನೆ*
ಹೆಎಂಪಿವಿ ವೈರಸ್ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ…
Latest
6 hours ago
*ಧರ್ಮಸ್ಥಳದ ಸರತಿ ಸಾಲಿನ ನೂತನ ಸಂಕೀರ್ಣ ಉದ್ಘಾಟಿಸಿದ ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್*
ಪ್ರಗತಿವಾಹಿನಿ ಸುದ್ದಿ: ಭಾರತವು ಜಗತ್ತಿನ ಅಧ್ಯಾತ್ಮಿಕ ಕೇಂದ್ರದಂತಿದ್ದು, ಧರ್ಮಸ್ಥಳವು ಅದಕ್ಕೆ ಕೀರ್ತಿ ಕಳಶದಂತಿದೆ. ಲಕ್ಷಾಂತರ ಜನರು ದೇವರನ್ನು ಹರಸಿ ಈ…
Politics
7 hours ago
*ಯಲ್ಲಮ್ಮ ದೇವಸ್ಥಾನಕ್ಕೆ ಕೇಂದ್ರದಿಂದ 100 ಕೋಟಿ ಬಿಡುಗಡೆ: ಸಂಸದ ಜಗದೀಶ್ ಶೆಟ್ಟರ್*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಡೆವೇಲಫ್ ಆಫ್ ಎಕೋನಾಮಿಕ್ಸ್ ಟೂರಿಸ್ಟ್ ಸೆಂಟರ್ ಟೂ ಗ್ಲೋಬಲ್ ಸ್ಕೇಲ್…
Politics
7 hours ago
*ಹಣ ಕೈಯಲ್ಲಿ ಇದ್ದರೂ ಸ್ಕಾಲರ್ ಶಿಪ್ ವಿತರಣೆಯಲ್ಲಿ ನಿರ್ಲಕ್ಷ್ಯ: ಅಧಿಕಾರಿಗಳ ಚಳಿ ಬಿಡಿಸಿದ ಸಿಎಂ*
ಪ್ರಗತಿವಾಹಿನಿ ಸುದ್ದಿ: ಸರ್ಕಾರ ಕೊಟ್ಟ ಹಣವನ್ನು ಖರ್ಚು ಮಾಡದೆ ವರ್ಷದ ಕೊನೆ ತಿಂಗಳಲ್ಲಿ ಖರ್ಚು ಮಾಡುವ ಅಧಿಕಾರಿಗಳ ಅಭ್ಯಾಸದ ವಿರುದ್ಧ…
Karnataka News
7 hours ago
*ಶಿವಮೊಗ್ಗದಲ್ಲಿ 6 ಮಕ್ಕಳಲ್ಲಿ HMPV ವೈರಸ್…!*
ಪ್ರಗತಿವಾಹಿನಿ ಸುದ್ದಿ: HMPV ಎಂಬ ಹೊಸ ವೈರಸ್ ಪ್ರಪಂಚದಾದ್ಯಂತ ಆತಂಕ ಸೃಷ್ಟಿಸಿರುವ ಬೆನ್ನಲ್ಲೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೂವರು ಮಕ್ಕಳಲ್ಲಿ…
Kannada News
8 hours ago
*ಕೊಲೆ ಪ್ರಕರಣದಲ್ಲಿ 9 ಆರ್ಎಸ್ಎಸ್ ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ*
ಪ್ರಗತಿವಾಹಿನಿ ಸುದ್ದಿ; ಕೇರಳದ ಕಣ್ಣೂರು ಜಿಲ್ಲೆಯಲ್ಲಿ 19 ವರ್ಷಗಳ ಹಿಂದೆ ನಡೆದ ಅಪರಾಧ ಸಿಪಿಐ ಕಾರ್ಯಕರ್ತ ರಿಜಿತ್ ಶಂಕರನ್ ಹತ್ಯೆಗೆ…