Latest

ಜಲಪಾತ ಕಂಡು “ಸ್ವರ್ಗ ಭೂಮಿ ಒಂದಾಗಿದೆ” ಎಂದು ಉದ್ಗರಿಸಿದ ಕೇಂದ್ರ ಸಚಿವ

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಕೇಂದ್ರ ಸಚಿವರೊಬ್ಬರು ಜಲಪಾತದ ಸೊಬಗು  ವೀಕ್ಷಿಸಿ “ಸ್ವರ್ಗ- ಭೂಮಿ ಒಂದಾಗಿದೆ” ಎಂದು ಉದ್ಗರಿಸಿದ್ದಾರೆ.

ಭಾರೀ ಮಳೆಗೆ  ಮೈತುಂಬಿಕೊಂಡು ಧುಮ್ಮಿಕ್ಕುತ್ತಿರುವ ಗೋವಾ ರಾಜ್ಯದ ದೂಧಸಾಗರ ಜಲಪಾತದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ  ಶೇರ್ ಮಾಡಿರುವ ಕೇಂದ್ರ ಪ್ರವಾಸೋದ್ಯಮ ಸಚಿವ ಜಿ. ಕಿಶನ್ ರೆಡ್ಡಿ ಅವರು  “ಸ್ವರ್ಗ ಭೂಮಿ ಒಂದಾಗಿದೆ. ಇದು ದೇಶದ ಅತ್ಯಂತ ಸುಂದರ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ. ಪ್ರಕೃತಿಯ ಅದ್ಭುತವನ್ನುಎಂದಿಗೂ ಮರೆಯದಂತೆ ಆಸ್ವಾದಿಸುವುದಾದರೆ ಒಮ್ಮೆ ಇಲ್ಲಿಗೆ ಭೇಟಿ ನೀಡಿ” ಎಂದು ಹೇಳಿದ್ದಾರೆ. 

ಜಾಲತಾಣಗಳಲ್ಲಿ ಜಲಪಾತ ಕುರಿತು ಸಚಿವರ ಕಾಮೆಂಟ್ ಗೆ ಹಲವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಆದೇಶ ವಾಪಸ್ ಗೆ ಮುಖ್ಯಮಂತ್ರಿಗಳು ನೀಡಿದ ಸ್ಪಷ್ಟೀಕರಣವೇನು?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button