Kannada NewsKarnataka NewsLatest

*ಬಂಧಿಸಲ್ಪಟ್ಟ ಶಂಕಿತ ಉಗ್ರನ ಮನೆ ಮೇಲೆ NIA ಮತ್ತೆ ದಾಳಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದೇಶದಲ್ಲಿ ಉಗ್ರರ ಚಟುವಟಿಕೆ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಎನ್ ಐ ಎ ಅಧಿಕಾರಿಗಳು ಕರ್ನಾಟಕ, ಮಹರಾಷ್ಟ್ರ ಸೇರಿದಂತೆ 44 ಕಡೆ ನಿನ್ನೆ ದಾಳಿ ನಡೆಸಿ, 15 ಶಂಕಿತ ಉಗ್ರರನ್ನು ಬಂಧಿಸಿದ್ದರು.

ಬಂಧಿತರಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದರು. ಇವರಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದ ಓರ್ವ ಶಂಕಿತ ಉಗ್ರ ಅಬ್ಬಾಸ್ ಅಲಿ ಎಂಬಾತನನ್ನು ಕೂಡ ಬಂಧಿಸಿದ್ದರು. ಅಬ್ಬಾಸ್ ಅಲಿ ಮನೆ ಮೇಲೆ ಇಂದು ಕೂಡ ಎನ್ ಐ ಎ ಅಧಿಕಾರಿಗಳು ಮತ್ತೆ ದಾಳಿ ನಡೆಸಿದ್ದಾರೆ.

Home add -Advt

ಪುಲಕೇಶಿ ನಗರದ ಮೋರ್ ರಸ್ತೆಯಲ್ಲಿರುವ ಅಬ್ಬಾಸ್ ಅಲಿ ಪೇಟಿವಾಲಾ ಮನೆ ಮೇಳೆ ದಾಳಿ ನಡೆಸಿರುವ ಎನ್ ಐ ಎ ಅಧಿಕಾರಿಗಳ ತಂಡ, ಮೊಬೈಲ್, ಲ್ಯಾಪ್ ಟಾಪ್ ಗಳನ್ನು ವಶಕ್ಕೆ ಪಡೆದು ಪರಿಸೀಲನೆ ನಡೆಸಿದ್ದಾರೆ. ನಿನ್ನೆ ನಡೆದಿದ್ದ ದಾಳಿಯಲ್ಲಿ ಶಂಕಿತನ ಮನೆಯಲ್ಲಿ 16,42,000 ನಗದು ಹಣ ಪತ್ತೆಯಾಗಿತ್ತು.

ಮೂಲತಃ ಮುಂಬೈದವನಾಗಿರುವ ಅಬ್ಬಾಸ್ ಅಲಿ ಸಾಫ್ಟ್ ವೇರ್ ಉದ್ಯೋಗಿಯಾಗಿದ್ದು, ಐಸಿಸ್ ಜೊತೆ ಸಂಪರ್ಕ ಹೊಂದಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.

Related Articles

Back to top button