Politics

*ಗೃಹ ಸಚಿವ ಕೊಠಡಿಯಲ್ಲಿ ನಾಲ್ವರು ಸಚಿವ ರಹಸ್ಯ ಸಭೆ: ಕುತೂಹಲ ಮೂಡಿಸಿದ ನಡೆ*

ಪ್ರಗತಿವಾಹಿನಿ ಸುದ್ದಿ: ಒಂದೆಡೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ಸಿಎಂ ಗದ್ದುಗೆ ಗುದ್ದಾಟ ನಡೆಯುತ್ತಿದ್ದರೆ, ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಸಚಿವರ ಲಾಭಿಯೂ ಜೋರಾಗಿದೆ. ಈ ನಡುವೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕೊಠಡಿಯಲ್ಲಿ ನಾಲ್ವರು ಸಚಿವರು ರಹಸ್ಯ ಸಭೆ ನಡೆಸಿದ್ದಾರೆ.

Home add -Advt

ವಿಧಾನಸೌಧದಲ್ಲಿ ಗೃಹ ಸಚಿವರ ಕೊಠಡಿಯಲ್ಲಿ ಸಚಿವರಾದ ಡಾ.ಜಿ.ಪರಮೇಶ್ವರ್, ಹೆಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ, ಕೆ.ಎನ್.ರಾಜಣ್ಣ ಸಭೆ ನಡೆಸಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ವಾಲ್ಮೀಕಿ ಸಮಾಜದ ಪ್ರಸನ್ನಾನಂದ ಸ್ವಾಮಿಗಳು ಸಹ ಈ ಸಂದರ್ಭದಲ್ಲಿ ಇದ್ದರು. ಇದರ ಫೋಟೋ ಎಲ್ಲೆಡೆ ಹರಿದಾಡುತ್ತಿದೆ.

ಇತ್ತೀಚೆಗೆ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವರು ಡಿನ್ನರ್ ಮೀಟಿಂಗ್ ನಡೆಸಿದ್ದರು. ಇದು ತೀವ್ರ ಚರ್ಚೆಗೆ ಕಾರಣವಾಗಿತ್ತು. ಹೈಕಮಾಂಡ್ ಪ್ರತ್ಯೇಕ ಸಭೆ ನಡೆಸದಂತೆ ತಾಕೀತು ಮಾಡಿತ್ತು. ಆದಾಗ್ಯೂ ಈಗ ಗೃಹ ಸಚಿವರ ಕೊಠಡಿಯಲ್ಲಿ ರಹಸ್ಯ ಸಭೆ ನಡೆದಿರುವುದು ತೀವ್ರ ಕುತೂಹಲ ಮೂಡಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಪರಮೇಶ್ವರ, ರಾಜನಹಳ್ಳಿ ಸ್ವಾಮಿಗಳು ಆಮಂತ್ರಣ ಕೊಡಲು ಬಂದಿದ್ದರು. ಇದು ಗೊತ್ತಾಗಿ ಉಳಿದ ಸಚಿವರೂ ಅಲ್ಲಿ ಬಂದರು. ಇದು ಸಭೆ ಅಲ್ಲ ಎಂದಿದ್ದಾರೆ.

Related Articles

Back to top button