ಪ್ರಗತಿವಾಹಿನಿ ಸುದ್ದಿ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ದಿನಕ್ಕೊಂದು ರಾಜಕೀಯ ತಿರುಪಡೆದುಕೊಳ್ಳುತ್ತಿದೆ. ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ವಿರುದ್ಧ ಬೆಳಿಗ್ಗೆಯಷ್ಟೇ ಸುದ್ದಿಗೋಷ್ಠಿ ನಡೆಸಿ, ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡಗೆ ಸಂಜೆ ವೇಳೆಗೆ ಶಾಕ್ ನೀಡಲಾಗಿದೆ. ದೇವರಾಜೇಗೌಡ ಹಾಗೂ ಎಲ್.ಆರ್.ಶಿವರಾಮೇಗೌಡ ಮಾತನಾದಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
ಇಬ್ಬರೂ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ಶಿವರಾಮೇಗೌಡ ಹೆಚ್.ಡಿ.ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಬಗ್ಗೆಯೂ ತೀವ್ರವಾಗಿ ಟೀಕಿಸಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿಯೇ ಪೆನ್ ಡ್ರೈವ್ ಬಿಟ್ಟಿದ್ದಾಗಿ ಹೇಳುವಂತೆ ದೇವರಾಜೇಗೌಡಗೆ ಶಿವರಾಮೇಗೌಡ ಒತ್ತಾಯಿಸಿದ್ದಾರೆ.
ಕುಮಾರಸ್ವಾಮಿಗೆ ಅವರ ಮಗ ಮುಂದೆ ಬರಬೇಕು ಎಂಬ ಆಸೆಯಿದೆ. ಆದರೆ ಪ್ರಜ್ವಲ್ ಮುಂದೆ ಬಂದಿದ್ದಾನಲ್ಲ ಹಾಗಾಗಿ ಬಿಟ್ಟಿದ್ದಾನೆ ಅಂತಾ ಹೇಳಿ. ದೇವೇಗೌಡ, ದೇವೇಗೌಡ ಮಕ್ಕಳು ಏನು ಕಡಿಮೆ ಅಂತಾ ತಿಳ್ಕೊಬೇಡಾ. ಇನ್ನೂ ಆತ್ಮಹತ್ಯೆ ಮಾಡಿಕೊಳ್ಳಲಿಲ್ವಲ್ಲಾ ದೇವೇಗೌಡ? ಇನ್ನೇನು ವಿಡಿಯೋ ಇದೆ? ಎಲ್ಲಾ ಕೊಡು. ಡಿ.ಕೆ ಬೆಳಿಗ್ಗೆ ಮಾತನಾಡಿದ್ರು. ನಿಮ್ಮ ಹತ್ತಿರ ಏನೇನಿದೆ ನಮಗೆ ಕೊಡಿ ಏನೂ ತಲೆ ಕೆಡಿಸಿಕೊಳ್ಳಬೇಡಿ. ಅವರನ್ನು ಬಲಿ ಹಾಕೋಕೆ ಸರ್ಕಾರ ತೀರ್ಮಾನಿಸಿದೆ ಅರ್ಥ ಆಯ್ತಾ? ಎಂದಿದ್ದಾರೆ. ಶಿವರಾಮೇಗೌಡ ಹೇಳಿಕೆಗೆ ಹಾಗೆ ಮಾಡುವುದು ಕಾನೂನು ಪ್ರಕಾರ ಶಿಕ್ಷೆ ಅಲ್ವೇ? ಹೆಣ್ಣುಮಕ್ಕಳ ಮಾನ ಮರ್ಯಾದೆ ಅಣ್ಣ ನಾವೂ ಯೋಚನೆ ಮಾಡಬೇಕು ಎಂದು ದೇವರಾಜೇಗೌಡ ಹೇಳಿದ್ದಾರೆ. ಇದಕ್ಕೆ ನೀವ್ಯಾಕೆ ತಲೆಕೆಡಿಸಿಕೊಳ್ಳಬೆಕು? ಚೆನ್ನೈನಲ್ಲಿ ಅಮಿತ್ ಶಾ ಹೇಳಿದ್ದಾರಲ್ಲ ಹೆಣ್ಮಕ್ಕಳಿಗೆ ಕರ್ನಾಟಕ ಸುರಕ್ಷಿತ ತಾಣವಲ್ಲ ಅಂತಾ ಎಂದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ