ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮೂಲ ಸೌಕರ್ಯ ಇಲ್ಲದೆ ಬೆಳಗಾವಿಯ ರಾಮತೀರ್ಥ ನಗದ ರಹವಾಸಿಗಳಿಗೆ ತೊಂದರೆ ಆಗುತ್ತಿದ್ದು, ಒಳ ಚರಂಡಿ ಸೇರದಂತೆ ಇತರೆ ಸೌಲಭ್ಯ ಕಲ್ಪಿಸುವಂತೆ ಮನವಿ ಸಲ್ಲಿಸಲಾಯಿತು.
ಇಂದು ನಗರದ ಬುಡಾ ಕಚೇರಿಗೆ ಆಮಿಸಿದ ರಾಮತೀರ್ಥ ನಗರದ ನಿವಾಸಿಗಳು ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಶಾಸಕ ಆಸೀಫ್ ಸೇಠ್ ಅವರಿಗೆ ಮನವಿ ಸಲ್ಲಿಸಿದರು. 2000 ಮತ್ತು 2004 ನೇ ಸಾಲಿನಲ್ಲಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿ ಪಡಿಸಿ ಆಸಕ್ತ ಜನರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ. ಸುಮಾರು 20 ರಿಂದ 24 ವರ್ಷಗಳಿಂದ ರಾಮತೀರ್ಥ ನಗರದ ಅಭಿವೃದ್ಧಿ ಕಾರ್ಯಗಳಿಗೆ ಪ್ರಾಧಿಕಾರವನ್ನು ಮತ್ತು ಜಿಲ್ಲಾ ಆಡಳಿತವನ್ನು ಇಲ್ಲಿನ ರಹವಾಸಿಗಳು ಒತ್ತಾಯಿಸುತ್ತಾ ಬಂದಿದ್ದಾರೆ.
ಆದರೂ ಕೂಡಾ ಇದುವರೆಗೂ ಒಳಚರಂಡಿ ಯೋಜನೆ ಮರೀಚಿಕೆಯಾಗಿದೆ. ಒಟ್ಟು 4,200 ನಿವೇಶನಗಳಿದ್ದು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲಾ, ಗುಣಮಟ್ಟದ ರಸ್ತೆ ನಿರ್ಮಾಣವಾಗಿರುವುದಿಲ್ಲಾ. ಖುಲ್ಲಾ ನಿವೇಶನಗಳಲ್ಲಿ ದಟ್ಟವಾದ ಗಿಡಗಂಟಿಗಳು ಬೆಳೆದು ಅಕ್ಕಪಕ್ಕದ ಜನರಿಗೆ ಹುಳಹುಪ್ಪಡಿಗಳ ಕಾಟದಿಂದ ತೊಂದರೆ ಉಂಟಾಗುತ್ತಿದೆ. ರಾಮತೀರ್ಥ ನಗರದಲ್ಲಿ ಸುಮಾರು ಜನರು ನಿವೃತ್ತ ನೌಕರರು ಮತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರು ವಿದ್ಯಾರ್ಥಿ ನಿಲಯಗಳಲ್ಲಿ ವಾಸವಾಗಿದ್ದು ಅವರ ಆರೋಗ್ಯದಲ್ಲಿಯೂ ಏರು ಪೇರಾಗುವ ಸಂಭವವಿದೆ ಎಂದರು.
ಈ ವೇಳೆ ನಗರ ಸೇವಕ ಹನಮಂತ ಕೊಂಗಾಲಿ, ಮಾಜಿ ಮಹಾಪೌರ ಎನ್ ಬಿ ನಿರ್ವಾಣಿ, ಸಿ ಎಸ್ ಬಿಡ್ನಾಳ್, ಸುರೇಶ್ ಉರುಬನಟ್ಟಿ, ಸುರೇಶ ಯಾದವ್, ಪ್ರಕಾಶ್ ಕೌಜಲಗಿ, ಚನ್ನಗೌಡ, ಸುನಿಲ್ ಭೂತೆ, ಮೃತ್ಯುಂಜಯ ಸ್ವಾಮಿ, ಬಂದಾಯಿ, ರಾಜು ಪಾಟೀಲ್, ಪತ್ತಾರ್, ಕುಲಕರ್ಣಿ, ಗಣಾಚಾರಿ, ಹುದ್ದಾರ, ವಿವಿಧ ರಾಮತೀರ್ಥ ನಗರವಾಸಿಗಳ ಸಂಘಗಳಾದ ಶ್ರೀ ಸಿದ್ಧಿವಿನಾಯಕ ಮಂಡಳಿ, ಶ್ರೀ ವೀರಭದ್ರೇಶ್ವರ ಕಮಿಟಿ, ಶ್ರೀ ಗಣೇಶ ಉತ್ಸವ ಮಂಡಳಿ, ಶ್ರೀ ಕಾರ್ಯಸಿದ್ಧಿ ವಿನಾಯಕ ಮಂಡಳಿ (ಸ್ನೇಹ ಸಮಾಜ), ಶಿವಾಲಯ ಪರಿಸರ ವೇದಿಕೆ, ಬಸವೇಶ್ವರ ಬಡಾವಣೆಯ ಪ್ರಮುಖರು, ಶಿವಶಕ್ತಿ ಬಡಾವಣೆಯ ಪ್ರಮುಖರು, ವಿವಿಧ ಸಂಘಟನೆಯ ಪ್ರಮುಖರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ