Latest

ಅದು ರಾಮ ಮಂದಿರವಲ್ಲ, ಆರ್ ಎಸ್ ಎಸ್ ಮಂದಿರ; ವಿವಾದಾತ್ಮಕ ಹೇಳಿಕೆ ನೀಡಿದ ಪಿಎಫ್ ಐ ಮುಖಂಡ

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ರಾಮ ಮಂದಿರಕ್ಕೆ ಒಂದು ಪೈಸೆಯನ್ನೂ ಕೊಡಬೇಡಿ ಅದು ರಾಮ ಮಂದಿರವಲ್ಲ ಆರ್ ಎಸ್ ಎಸ್ ಮಂದಿರ ಎಂದು ಪಿಎಫ್ ಐ ಕಾರ್ಯದರ್ಶಿ ಅನಿಸ್ ಅಹ್ಮದ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ.

ಮಂಗಳೂರಿನಲ್ಲಿ ಮಾತನಾಡಿದ ಅನೀಸ್ ಅಹ್ಮದ್, ದೇಶದಲ್ಲಿ ಶಾಂತಿ ಸ್ಥಾಪನೆಗೆ ಬಾಬ್ರಿ ಮಸೀದಿ ಜಾಗ ಕೊಡಿ ಎಂದರು. ಕೊಟ್ಟ ಮೇಲೆ ದೇಶದಲ್ಲಿ ಶಾಂತಿ ಸ್ಥಾಪನೆ ಆಯಿತಾ? ಮುಸ್ಲೀಂರ ಮೇಲೆ ಹಲ್ಲೆ ನಡೆಸುವುದನ್ನು ಮುಂದುವರೆಸಿದ್ದಾರೆ. ಇದೆಲ್ಲವೂ ಆರ್ ಎಸ್ ಎಸ್ ಕುತಂತ್ರ ಎಂದು ಗುಡುಗಿದ್ದಾರೆ.

Home add -Advt

ಪಿಎಫ್ ಐ ನ ಶತ್ರು ಅಂದ್ರೆ ಅದು ಆರ್ ಎಸ್ ಎಸ್ ಮಾತ್ರ. ಆರ್ ಎಸ್ ಎಸ್ ಕ್ಯಾನ್ಸರ್ ಇದ್ದಂತೆ ಅದು ವಾಸಿಯಾಗಲ್ಲ ಎಂದು ಹೇಳಿದ್ದಾರೆ.

ಪಿಎಫ್ ಐ ಮುಖಂಡನ ಹೇಳಿಕೆಗೆ ಕಿಡಿಕಾರಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ರಾಮ ಮಂದಿರದ ಬಗ್ಗೆ ಮಾತನಾಡಲು ಆತನಿಗೇನು ಹಕ್ಕಿದೆ. ಇದೊಂದು ಮೂರ್ಖತನದ ಹೇಳಿಕೆ ಎಂದಿದ್ದಾರೆ.

Related Articles

Back to top button