Kannada NewsKarnataka NewsLatest

ಶನಿವಾರ ಬೆಳಗಾವಿಗೆ ಆಗಮಿಸಲಿರುವ ನೂತನ ರಾಜ್ಯಸಭಾ ಸದಸ್ಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ರಾಜ್ಯಸಭಾ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಈರಣ್ಣ ಕಡಾಡಿ ಶನಿವಾರ  ಬೆಳಗಾವಿಗೆ ಆಗಮಿಸಲಿದ್ದಾರೆ. ಪಕ್ಷದ ಕಾರ್ಯಕರ್ತರು ನಗರದ ಸಂಕಮ್ ಹೊಟೆಲ್ ಬಳಿ ಅವರನ್ನು ಸ್ವಾಗತಿಸಲಿದ್ದಾರೆ.

ಬೆಳಗ್ಗೆ 10 ಗಂಟೆಗೆ ಆಗಮಿಸಲಿರುವ ಅವರು ನಂತರ ಚನ್ನಮ್ಮ ವೃತ್ತದ ಬಳಿ ಗಣೇಶ ಮಂದಿರದಲ್ಲಿ ಪೂಜೆ ನೆರವೇರಿಸುವರು. ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ, ಬಾಬಾಸಾಹೇಬ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಕ್ಷದ ಕಾರ್ಯಾಲಯಕ್ಕೆ ಭೇಟಿ ನೀಡುವರು.

Home add -Advt

ನಂತರ ಬಸವೇಶ್ವರ ಪುತ್ಥಳಿಗೆ, ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರವಾಸಿ ಮಂದಿರಕ್ಕೆ ಆಗಮಿಸಿ ಅಲ್ಲಿಂದ 2.30ಕ್ಕೆ ಹೊರಟು 4 ಗಂಟೆಗೆ ಕಲ್ಲೋಳಿಗೆ ಆಗಮಿಸುವರು. ಕಲ್ಲೋಳಿಯಲ್ಲಿ ಹನುಮಂತ ದೇವರ ದರ್ಶನ ಮಾಡಿ ಕಾರ್ಯಕರ್ತರನ್ನು ಭೇಟಿ ಮಾಡಲಿದ್ದಾರೆ ಎಂದು ಮಹಾನಗರ ಅಧ್ಯಕ್ಷ ಶಶಿಕಾಂತ ಪಾಟೀಲ ತಿಳಿಸಿದ್ದಾರೆ.

ಸ್ವಾಗತಕ್ಕೆ ಆಗಮಿಸುವವರು ಕೊರೋನಾ ಹಿನ್ನೆಲೆಯಲ್ಲಿ ಹೂವು, ಶಾಲು, ಮಾಲೆ ತರದಂತೆ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಡ್ಡಾಯ ಎಂದು ತಿಳಿಸಲಾಗಿದೆ.

ಪ್ರಮಾಣಪತ್ರ ಸ್ವೀಕರಿಸಿದ ಈರಪ್ಪ ಕಡಾಡಿ

Related Articles

Back to top button