NationalPolitics

*ಸೌರ ಶಕ್ತಿ ನವೀನ ಯೋಜನೆಗಳಿಗೆ 500 ಕೋಟಿ ರೂ. ಮೀಸಲು: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾಹಿತಿ*

ಪ್ರಗತಿವಾಹಿನಿ ಸುದ್ದಿ: ಕೇಂದ್ರ ಸರ್ಕಾರ ಪಿಎಂ ಸೂರ್ಯ ಘರ್ ಯೋಜನೆಯಡಿ ನವೀಕರಿಸಬಹುದಾದ ಇಂಧನ ವಲಯಕ್ಕೆ 500 ಕೋಟಿ ರೂಪಾಯಿ ಮೀಸಲಿರಿಸಿದೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಪಿಎಂ ಸೂರ್ಯ ಘರ್ ಯೋಜನೆಯಡಿ ನವೀನ ಯೋಜನೆಗಳ ಅನುಷ್ಠಾನ ಮತ್ತು ಘಟಕಕ್ಕಾಗಿ ₹500 ಕೋಟಿ ಇರಿಸಿ ಮೊನ್ನೆಯಷ್ಟೇ ಮಾರ್ಗಸೂಚಿಗಳನ್ನು ಹೊರಡಿಸಿದೆ ಎಂದಿದ್ದಾರೆ.

ಸ್ಕೀಮ್ ಕಾಂಪೊನೆಂಟ್ ‘ಇನ್ನೋವೇಟಿವ್ ಪ್ರಾಜೆಕ್ಟ್’ನಡಿ ರೂಫ್‌ಟಾಪ್ ಸೌರ ತಂತ್ರಜ್ಞಾನ, ವ್ಯವಹಾರ ಮಾದರಿಗಳು ಮತ್ತು ಏಕೀಕರಣ ತಂತ್ರಗಳಲ್ಲಿ ಪ್ರಗತಿಗೆ ಈ ಮೊತ್ತ ಬಳಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸೋಲಾರ್ ಎನರ್ಜಿ (NISE) ನವೀನ ಯೋಜನೆಗಳ ಘಟಕಕ್ಕಾಗಿ ಸ್ಕೀಮ್ ಇಂಪ್ಲಿಮೆಂಟೇಶನ್ ಏಜೆನ್ಸಿ (SIA) ಆಗಿ ಕಾರ್ಯ ನಿರ್ವಹಿಸುತ್ತದೆ. ಆಯ್ದ ಪ್ರಾಜೆಕ್ಟ್‌ಗಳು ಯೋಜನಾ ವೆಚ್ಚದ ಶೇ.60ರಷ್ಟು ಅಥವಾ ₹30 ಕೋಟಿ, ಯಾವುದು ಕಡಿಮೆಯೋ ಅದನ್ನು ಪರಿಗಣಿಸಿ ಆರ್ಥಿಕ ನೆರವು ಪಡೆಯುತ್ತದೆ ಎಂದು ತಿಳಿಸಿದ್ದಾರೆ.

1 ಕೋಟಿವರೆಗೆ ಬಹುಮಾನ: ಸೌರ ವಿದ್ಯುತ್ ಯೋಜನೆ ಪ್ರಗತಿಗೆ, ಹೊಸತನಕ್ಕಾಗಿ ವಾರ್ಷಿಕ ಪ್ರಶಸ್ತಿಗಳನ್ನು ನೀಡಲಾಗುವುದು. ₹1 ಕೋಟಿವರೆಗೆ ಬಹುಮಾನಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

-75,021 ಕೋಟಿ ವೆಚ್ಚದ ಯೋಜನೆ ಸೌರ ಮೇಲ್ಛಾವಣಿ ಸಾಮರ್ಥ್ಯದ ಪಾಲನ್ನು ಹೆಚ್ಚಿಸುವ ಮತ್ತು ಸ್ವಂತ ವಿದ್ಯುಚ್ಛಕ್ತಿಯನ್ನು ಉತ್ಪಾದಿಸಲು ವಸತಿ ಮನೆಗಳಿಗೆ ಅಧಿಕಾರ ನೀಡುವ ಉದ್ದೇಶದಿಂದ ಭಾರತ ಸರ್ಕಾರ ಪಿಎಂ ಸೂರ್ಯ ಘರ್ ಯೋಜನೆ ಅನುಮೋದಿಸಿದ್ದು,ಇದು 75,021 ಕೋಟಿ ರೂ. ವೆಚ್ಚವನ್ನು ಹೊಂದಿದೆ. 2026-27 ರ ಆರ್ಥಿಕ ವರ್ಷದವರೆಗೆ ಜಾರಿಯಾಗಲಿದೆ ಎಂದು ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

IREDA ಹೊಸ ಕ್ರಾಂತಿ: ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದೆ ಎಂದು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ (IREDA) ಎರಡನೇ ತ್ರೈಮಾಸಿಕ ಫಲಿತಾಂಶ ಅತ್ಯುತ್ತಮವಾಗಿದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ.

IREDA ಆದಾಯದಲ್ಲಿ ಶೇ.38ರಷ್ಟು ಹೆಚ್ಚಳ ಕಂಡಿದೆ. ಮತ್ತು PAT ನಲ್ಲಿ ಸಹ ಶೇ.36ರಷ್ಟು ಬೆಳವಣಿಗೆ ಹೊಂದುವ ಮೂಲಕ ಅಭೂತಪೂರ್ವ ಸಾಧನೆಗೈದಿದೆ ಎಂದು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button