Latest

ಅನೈತಿಕ ಸಂಬಂಧದ ಅಪಪ್ರಚಾರ, ಮಕ್ಕಳೊಂದಿಗೆ ನಾಲೆಗೆ ಹಾರಿ ಮಹಿಳೆ ಆತ್ಮಹತ್ಯೆ; ಧಾರುಣ ಘಟನೆ

ಪ್ರಗತಿ ವಾಹಿನಿ ಸುದ್ದಿ, ಶಿವಮೊಗ್ಗ: ಕೊಟ್ಟ ಸಾಲವನ್ನು ಮರಳಿಸುವಂತೆ ಕೇಳಿದ ಮಹಿಳೆಗೆ , ಸಾಲ ಪಡೆದ ವ್ಯಕ್ತಿ ಅನೈತಿಕ ಸಂಬಂಧದ ಅಪಪ್ರಚಾರ ಮಾಡಿದ್ದಾನೆ. ಅವಮಾನ ಸಹಿಸಲಾಗದೆ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಯಡೇಹಳ್ಳಿಯಲ್ಲಿ ನಡೆದಿದೆ.

ವೀಣಾ(32) ತನ್ನ ಇಬ್ಬರು ಮಕ್ಕಳಾದ ವರ್ಷ(7), ಹಾಗೂ 1 ವರ್ಷದ ಹೆಣ್ಣು ಮಗುವಿನ ಸಮೇತ ನಾಲೆಗೆ ಹಾರಿ ಮೃತಪಟ್ಟವರು. ಆತ್ಮಹತ್ಯೆಯ ಕಾರಣವನ್ನು ವೀಣಾ ಬರೆದ ಡೆತ್ ನೋಟ್ ಮೂಲಕ ಪೊಲೀಸರು ಪತ್ತೆ ಮಾಡಿದ್ದಾರೆ.

Home add -Advt

*ಅನೈತಿಕ ಸಂಬಂಧದ ಅಪಪ್ರಚಾರ*

ಸಂತೋಷ್ ಎಂಬ ವ್ಯಕ್ತಿಗೆ ವೀಣಾ 8 ಲಕ್ಷ ರೂ. ಸಾಲ ನೀಡಿದ್ದರು. ಸಾಲದ ಹಣವನ್ನು ವೀಣಾ ಸಂತೋಷ್‌ನಿಂದ ವಾಪಾಸ್ ಕೇಳಿದಾಗ ಆತ ವೀಣಾ ವಿರುದ್ಧ ಅನೈತಿಕ ಸಂಬಂಧದ ಬಗ್ಗೆ ಅಪಪ್ರಚಾರ ಮಾಡಿದ್ದಾನೆ.

ಇದರಿಂದ ತೀವ್ರ ಅವಮಾನಗೊಂಡ ವೀಣಾ ಮನನೊಂದು ತನ್ನ ಇಬ್ಬರು ಮಕ್ಕಳೊಂದಿಗೆ ಶುಕ್ರವಾರ ಸಿದ್ಧಾಪುರ ಬಳಿಯ ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶನಿವಾರ ಹೊನ್ನಾಳಿ ತಾಲೂಕಿನ ಯಕ್ಕನಹಳ್ಳಿ ಬಳಿ ವೀಣಾ ಮೃತದೇಹ ಪತ್ತೆಯಾಗಿದೆ. ಚನ್ನಗಿರಿ ತಾಲೂಕಿನ ನಲ್ಲೂರು ಬಳಿ 7 ವರ್ಷದ ಮಗುವಿನ ಮೃತದೇಹವೂ ದೊರಕಿದೆ. 1 ವರ್ಷದ ಮಗುವಿನ ಮೃತದೇಹಕ್ಕೆ ಶೋಧಕಾರ್ಯ ಮುಂದುವರಿದಿದೆ.

ಘಟನೆಯ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಸಂತೋಷ್‌ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕಿಡ್ನಾಪ್ ಆಗಿದ್ದ ಅಪ್ರಾಪ್ತ ಬಾಲಕಿ ಬೆಂಗಳೂರಿನಲ್ಲಿ ಪತ್ತೆ

Related Articles

Back to top button