Kannada NewsKarnataka NewsLatest

ನಾಳೆ ಹಲವೆಡೆ ವಿದ್ಯುತ್ ಪೂರೈಕೆ ವ್ಯತ್ಯಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಿಂದ ಕಣಬರ್ಗಿ 110 ಕೆವಿ ಉಪಕೇಂದ್ರದಲ್ಲಿ ಮೊದಲ ತ್ರೈಮಾಸಿಕ ಹಾಗೂ ಇತರ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಏ.16ರಂದು ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಈ ಉಪಕೇಂದ್ರದಿಂದ ವಿದ್ಯುತ್ ಪೂರೈಕೆಯಾಗುವ ಪ್ರದೇಶಗಳಾದ ಮುಚ್ಚಂಡಿ, ಅಷ್ಟೆ, ಕ್ಯಾಂಪ್‌ಬೆಲ್, ಮಾರಿಹಾಳ, ಕರಡಿಗುದ್ದಿ, ಪಂತಬಾಳೇಕುಂದ್ರಿ, ಬಾಳೇಕುಂದ್ರಿ, ಹೊನ್ನಿಹಾಳ, ಮಾವಿನಕಟ್ಟಿ, ತಾರಿಹಾಳ, ಚಂದನ ಹೊಸೂರ, ಎಂ.ಇ.ಎಸ್, ಸಾಂಬ್ರಾ, ಮುತಗಾ, ಸುಳೇಭಾವಿ, ಪಂತ ನಗರ, ಮೋದಗಾ, ಯದ್ದಲಭಾವಿಹಟ್ಟಿ, ಖನಗಾಂವ, ಚಂದೂರ, ಚಂದಗಡ, ಗಣಿಕೊಪ್ಪ, ಗುಂಜ್ಯಾನಟ್ಟಿ, ಕೇದನೂರ, ಮನ್ನಿಕೇರಿ, ಹಂದಿಗನೂರ, ಚೆಲುವ್ಯಾನಟ್ಟಿ, ಮಾಳೇನಟ್ಟಿ, ಅತಿವಾಡ, ಬೋಡಕ್ಯಾನಟ್ಟಿ, ಕುರಿಹಾಳ, ಕಟ್ಟಣಭಾವಿ, ನಿಂಗ್ಯಾನಟ್ಟಿ, ಗುರಾಮಟ್ಟಿ, ಹಳೆಇದ್ದಲಹೊಂಡ, ಶಿವಾಪುರ, ಪರಶ್ಯಾನಟ್ಟಿ, ಹೊನಗಾ, ದಾಸರವಾಡಿ, ಕೆಂಚ್ಯಾನಟ್ಟಿ, ಸೋನಟ್ಟಿ, ಬೈಲೂರ, ಹೆಗ್ಗೇರಿ, ದೇವಗಿರಿ, ಹುಲ್ಯಾನೂರ, ಬುಡ್ರ್ಯಾನೂರ, ಧರನಟ್ಟಿ, ಭರನಟ್ಟಿ, ಕಡೋಲಿ, ಅಗಸಗಾ ಹಾಗೂ ಜಾಫರವಾಡಿ ಗ್ರಾಮಗಳಲ್ಲಿ ಬೆಳಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗುತ್ತಿದೆ.

ಈ ಗ್ರಾಮಗಳ ನೀರಾವರಿ ಪಂಪ್‌ಸೆಟ್‌ಗಳ ಏರಿಯಾಗಳಿಗೂ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಗ್ರಾಮೀಣ ವಿಭಾಗದ ಕಾರ್ಯ ಮತ್ತು ಪಾಲನಾ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt
https://pragati.taskdun.com/outline-discussion-of-20-day-tour-of-national-leaders-cm-basavaraja-bommai/

https://pragati.taskdun.com/13th-all-karnataka-gamaka-kala-sammelna-at-belagavi-on-16th-and-17th/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button