
ಪ್ರಗತಿವಾಹಿನಿ ಸುದ್ದಿ: ಬಿಜೆಪಿ ಶಾಸಕ ಪ್ರಭು ಚೌವ್ಹಾಣ್ ಅವರಿಗೆ ಅಶ್ಲೀಲ ವಿಡಿಯೋ ಕಳುಹಿಸಿ ಬೆದರಿಕೆ ಹಾಕಿದ್ದ ಆರೋಪಿಯನ್ನು ಬಂಧಿಸಲಾಗಿದೆ.
ನಂದಿಬಿಜಲಗಾಂವ್ ತಾಂಡಾದ ನಿವಾಸಿ ವಿಕಾಸ್ ಪವಾರ್ ಬಂಧಿತ ಆರೋಪಿ. ಈತನನ್ನು ಹೈದರಾಬಾದ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ವಿಕಾಸ್, ಪ್ರಭು ಚೌವ್ಹಾಣ್ ಅವರಿಗೆ ಪ್ರಭು ಚೌವ್ಹಾಣ್ ಹಾಗೂ ಯುವತಿಯೊಬ್ಬಳ ಫೋಟೋ ಇರುವ ಎಡಿಟ್ ಮಾಡಿದ್ದ ವಿಡಿಯೋ ಕಳುಹಿಸಿ 30 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ. ಹಣ ಕೊಡದಿದ್ದರೆ ವಿಡಿಯೋ ಯೂಟ್ಯೂಬ್ ಗೆ ಅಪ್ ಲೋಡ್ ಮಾಡುವುದಾಗಿ ಬೆದರಿಸಿದ್ದ. ಈ ಬಗ್ಗೆ ಹೊಕ್ರಾಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.