Politics

*ಕಾಂಗ್ರೆಸ್ ನೆಚ್ಚಿದ ಪ್ರಾದೇಶಿಕ ಪಕ್ಷಗಳೂ ಮುಳುಗಲಿವೆ: ಭವಿಷ್ಯ ನುಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ*

ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ಅನ್ನು ನೆಚ್ಚಿಕೊಂಡು ಹೋದರೆ ಪ್ರಾದೇಶಿಕ ಪಕ್ಷಗಳು ಮುಳುಗಿ ಹೋಗಲಿವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ಮಹಾರಾಷ್ಟ್ರ ಮತ್ತು ಜಾರ್ಖಂಡ್ ಚುನಾವಣೆ ಫಲಿತಾಂಶವೇ ಇದಕ್ಕೆ ನಿದರ್ಶನ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಇದರೊಂದಿಗೆ ಹೋದ ಪ್ರಾದೇಶಿಕ ಪಕ್ಷಗಳ ಗತಿಯೂ ಹಾಗೇ ಆಗಲಿದೆ ಎಂದು ಭವಿಷ್ಯ ನುಡಿದರು ಜೋಶಿ.

Home add -Advt

ದೇಶದ ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅದು ತನ್ನೊಂದಿಗೆ ತನ್ನ ಕೈ ಹಿಡಿದು ಬಂದವರನ್ನೂ ಮುಳುಗಿಸುತ್ತಿದೆ ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮೈತ್ರಿಗೆ ಹೀನಾಯ ಸೋಲು: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ. ಅದರೊಂದಿಗೆ ಮೈತ್ರಿ ಮಾಡಿಕೊಂಡ ಸ್ಥಳೀಯ ಪಕ್ಷಗಳೂ ಕಾಂಗ್ರೆಸ್ ಜತೆ ಮುಳುಗಿ ಹೋಗಿವೆ ಎಂದು ಮಹಾರಾಷ್ಟ್ರ ಫಲಿತಾಂಶವನ್ನು ವಿಶ್ಲೇಷಿಸಿದರು.

ಸೋಲು-ಗೆಲುವು ಸಹಜ, ಆದ್ರೆ ಕಾಂಗ್ರೆಸ್ ಅಸ್ಥಿತ್ವವೇ ಇಲ್ಲದಂತಹ ಸ್ಥಿತಿ: ಚುನಾವಣೆಯಲ್ಲಿ ಯಾವುದೇ ಪ, ಅಭ್ಯರ್ಥಿ ಸೋಲು – ಗೆಲುವು ಸಹಜ. ಆದರೆ ಕಾಂಗ್ರೆಸ್ ಅಸ್ಥಿತ್ವವೇ ಇಲ್ಲದಂತಹ ಸ್ಥಿತಿಗೆ ತಲುಪಿದೆ ಎಂದು ಟೀಕಿಸಿದರು.

ಶರದ್ ಪವಾರ್ ನೇತೃತ್ವದ ಎನ್ ಸಿ, ಉದ್ದವ ಠಾಕ್ರೆ ನೇತೃತ್ವದ ಶಿವಸೇನಾವನ್ನು ಕಾಂಗ್ರೆಸ್ ನವರು ಮುಳುಗಿಸಿದ್ದರು. ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದಿದ್ದರೆ ಜೆಎಂಎಂ ಅನ್ನೂ ಮುಳುಗಿಸುತ್ತಿದ್ದರು ಎಂದು ಹೇಳಿದರು.

ಜಾರ್ಖಂಡ್ ಅಲ್ಲಿ ಬಿಜೆಪಿ ಪೈಪೋಟಿ ಕೊಟ್ಟಿದೆ: ಇನ್ನು ಜಾರ್ಖಂಡ್ ಅಲ್ಲಿ ಸಹ ಬಿಜೆಪಿ ಕಾಂಗ್ರೆಸ್ ಗೆ ತುರುಸಿನ ಪೈಪೋಟಿವೊಡ್ಡಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಸಮರ್ಥಿಸಿಕೊಂಡರು.

Related Articles

Back to top button