Politics

*ಓರ್ವ ಸಂಸದನಾಗಿ ಈ ರೀತಿ ಮಾಡೋದಾ? ಪ್ರಜ್ವಲ್ ರೇವಣ್ಣ ಸೈಕೋ ಇದ್ದಾನೆ; ಸಚಿವ ಎಂ.ಬಿ.ಪಾಟೀಲ್ ಕಿಡಿ*

ಪ್ರಗತಿವಾಹಿನಿ ಸುದ್ದಿ: ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಚಿವ ಎಂ.ಬಿ.ಪಾಟೀಲ್, ಪ್ರಜ್ವಲ್ ರೇವಣ್ಣ ಎಲ್ಲಿಯೇ ಅಡಗಿದ್ದರೂ ಆತನನ್ನು ಹುಡುಕಿ ಕರೆತಂದು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್, ಓರ್ವ ಸಂಸದನಾಗಿ ಈ ರೀತಿ ಮಾಡೋದಾ? ಪ್ರಜ್ವಲ್ ರೇವನ್ಣ ಒಬ್ಬ ಸೈಕೋ ಇದ್ದಾನೆ. 2000 ವಿಡಿಯೋ, 3000 ವಿಡಿಯೋಗಳನ್ನು ಮಾಡಿದ್ದಾನೆ. ಹಳೆಯದೋ, ಹೊಸದೋ…ಹಳೆಯದು, ಹೊಸದು ಎಲ್ಲವೂ ಇದೆ. ಇಂತದ್ದನ್ನೆಲ್ಲ ಯಾರು ಮಾಡಲು ಹೇಳುತ್ತಾರೆ? ಆತನೇ ಮಾಡಿರುವುದು. ಪ್ರಜ್ವಲ್ ಒಬ್ಬ ಸೈಕೋ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ತನಿಖೆಗೆ ಎಸ್ ಐಟಿ ರಚಿಸಲಾಗಿದ್ದು, ವಿಚಾರಣೆಗೆ ಹಾಜರಾಗಲು ಆತನಿಗೆ ನೋಟೀಸ್ ನೀಡಿ ಡೆಡ್ ಲೈನ್ ಕೂಡ ಕೊಡಲಾಗಿದೆ. ವಿಚರಣೆಗೆ ಹಾಜರಾಗಬೇಕು. ಇಲ್ಲವಾದಲ್ಲಿ ಆತ ಎಲ್ಲಿಯೇ ಇರಲಿ, ಪಾತಾಳದಲ್ಲಿಯೇ ಇದ್ದರೂ ಕರೆತಂದು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button