ಪ್ರಗತಿವಾಹಿನಿ ಸುದ್ದಿ, ನೇಗಿನಹಾಳ – ಪಂಚಮಿ ಹಬ್ಬಕ್ಕೆ ಹೆಣ್ಣು ಮಕ್ಕಳನ್ನು ತವರು ಮನೆಗೆ ಕರೆದು ಅವರನ್ನು ಆದರಾತಿತ್ಯದಿಂದ ಸತ್ಕರಿಸಿ ಕಳುಹಿಸುವುದು ಭಾರತೀಯ ಪರಂಪರೆಯಾಗಿದ್ದು ಇತಂಹ ಸಂಸ್ಕೃತಿಯಲ್ಲಿ ಬೆಳೆದು ಬಂದಿರುವ ನಾನು ಇಂದು ಜಿ.ಪಂ ಸದಸ್ಯೆ ರೋಹಿಣಿ ಪಾಟೀಲ ಅವರ ಮನೆಗೆ ಬಂದು ಸತ್ಕಾರ ಸ್ವೀಕರಿಸಿದ್ದು ಅಷ್ಟೇ ಸಂತೋಷವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.
ನೇಗಿನಾಳ ಗ್ರಾಮದ ಕಾಂಗ್ರೆಸ್ ಮುಖಂಡ ಬಾಬಾಸಾಹೇಬ ಪಾಟೀಲ ಅವರ ಮನೆಗೆ ಕೆಪಿಸಿಸಿ ಪ್ರಿಯಾಂಕಾ ಜಾರಕಿಹೊಳಿ ಭೇಟಿ ನೀಡಿದ್ದರು. ರೋಹಿಣಿ ಪಾಟೀಲ ಅವರು ಪಂಚಮಿ ಹಬ್ಬದ ನಿಮಿತ್ತ ಕುಂಕುಮ, ಬಳೆ ನೀಡಿ, ಉಡಿ ತುಂಬಿ ಸತ್ಕರಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯೆ ಮಹಾದೇವಿ ಕೋಟಗಿ, ಕವಿತಾ ಬೆಳಗಾವಿ, ಚನ್ನಮ್ಮ ಶಿಂತ್ರಿ, ಉದ್ಯಮಿ ನಾನಾಸಾಹೇಬ ಪಾಟೀಲ, ಸಮಾಜ ಸೇವಕ ಕೃಷ್ಣಾಜಿ ಕುಲಕರ್ಣಿ , ಶಿವಾನಂದ ಕುಂಕೂರ, ಚಿದಾನಂದ ಬೆಳಗಾವಿ, ಬಸವರಾಜ ಅಂಗಡಿ, ಮಡಿವಾಳಪ್ಪ ವನ್ನೂರ, ಈರಣ್ಣಾ ಉಳವಿ, ಮಂಜುನಾಥ ಹಾರುಗೊಪ್ಪ, ಮಂಜುನಾಥ ಕೋಟಗಿ, ನಾಗರಾಜ ಕುಂಕೂರ ಮಣಿಕಂಠ ಇಂಗಳಗಿ ಮತ್ತಿತ್ತರರು ಉಪಸ್ಥಿತರಿದ್ದರು.
ಲಕ್ಷ್ಮಿ ದೇವಿ ಮಂದಿರಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ