Kannada NewsKarnataka NewsLatest

ಅಳಿಯನನ್ನೆ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಅರೆಸ್ಟ್ ಆದ ಮಾವ

ಪ್ರಗತಿವಾಹಿನಿ  ಸುದ್ದಿ, ಕಕ್ಕೇರಿ: ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ಕೌಟುಂಬಿಕ ಕಲಹ ಕಾರಣವಾಗಿ ಹರಿತವಾದ ಆಯುಧದಿಂದ ಅಳಿಯನನ್ನು ಮಾವನೇ ಕೊಲೆ ಮಾಡಿರುವ ಘಟನೆ ಸೋಮವಾರ ನಡೆದಿದೆ.

ಗ್ರಾಮದ ನಿವಾಸಿ ಬಿಷ್ಟಪ್ಪ ಕೊನಸಕುಂಪಿ(43) ಕೊಲೆಯಾದ ದುರ್ದೈವಿ ಅಳಿಯ. ಸೋಮವಾರ ರಾತ್ರಿ ಕೊಲೆಯಾದ ಬಿಷ್ಟಪ್ಪ ಅವರ ಮಾವ ಅಂದರೆ ಹೆಂಡತಿಯ ತಂದೆಯ ಜೊತೆಗೆ ಕೌಟುಂಬಿಕ ಕಾರಣಕ್ಕಾಗಿ ಮಾತಿಗೆ ಮಾತು ಬೆಳೆದು ಜಗಳ ಆಗಾಗ ಆಗುತ್ತಿತ್ತು. ರಾತ್ರಿ ಭತ್ತದ ರಾಶಿ ಕಾಯಲು ಕಣದಲ್ಲಿ ಮಲಗಿದಾಗ ಮಾವನಿಂದ ಬರ್ಬರ ಹತ್ಯೆಯಾಗಿದೆ. ಮಾರಕಾಸ್ತ್ರದಿಂದ ಅಳಿಯ ಬಿಷ್ಟಪ್ಪನ  ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಸ್ಥಳದಲ್ಲಿಯೇ ಆತ ಕೊನೆಯುಸಿರೆಳೆದಿದ್ದಾನೆ. 

Home add -Advt

 ಸುದ್ದಿ ತಿಳಿಯುತ್ತಿದ್ದಂತೆ ನಂದಗಡ ಠಾಣೆ ಪೊಲೀಸರು ಆಗಮಿಸಿ ಕೊಲೆ ಆರೋಪಿಯನ್ನು ಬಂಧಿಸಿ ಮುಂದಿನ ತನಿಖೆ ನಡೆಸಲು ವರಿಷ್ಠ ಪೋಲೀಸ್ ಅಧಿಕಾರಿಗಳು ಶ್ವಾನ ಪಡೆಯೊಂದಿಗೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊಲದಲ್ಲಿಯೇ ವ್ಯಕ್ತಿಯ ಬರ್ಬರ ಹತ್ಯೆ

Related Articles

Back to top button