Kannada NewsKarnataka NewsLatest

ದೇವಸ್ಥಾನಗಳಿಂದ ಜನರಿಗೆ ಶಾಂತಿ, ನೆಮ್ಮದಿ -ಮೃಣಾಲ್ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಬೆಳಗಾವಿ ಗ್ರಾಮೀಣ ಕ್ಷೇತ್ರದ ಕೊನೇವಾಡಿ ಗ್ರಾಮದಲ್ಲಿ ಮಂದಿರ ನಿರ್ಮಾಣ ಕಾಮಗಾರಿಗೆ ಪೂಜೆ ನಡೆಯಿತು.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಪುತ್ರ, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ಉಪಸ್ಥಿತಿಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗ್ರಾಮದ ಹಿರಿಯರು ಪೂಜೆ ಸಲ್ಲಿಸಿದರು.

Home add -Advt

ಈ ವೇಳೆ ಮಾತನಾಡಿದ ಮೃಣಾಲ್ ಹೆಬ್ಬಾಳಕರ್, ದೇವಸ್ಥಾನಗಳಿಂದ ಜನರಿಗೆ ಶಾಂತಿ, ನೆಮ್ಮದಿ ಸಿಗುತ್ತದೆ. ಗ್ರಾಮದಲ್ಲಿ ಅಹ್ಲಾದಕರ ವಾತಾವರಣ  ನಿರ್ಮಾಣವಾಗುತ್ತದೆ. ಜನರು ಒಗ್ಗಟ್ಟಿನಿಂದ ಗ್ರಾಮದ ಅಭಿವೃದ್ಧಿಗೆ ಸಹಕಾರ ನೀಡಿದರೆ, ಆಶಿರ್ವದಿಸಿದರೆ ಗ್ರಾಮವನ್ನು ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಬೇಕೆನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಕನಸು ಶೀಗ್ರ ನನಸಾಗಲಿದೆ ಎಂದರು.

ಕೊನೇವಾಡಿ ಗ್ರಾಮದಲ್ಲಿ ಸುಮಾರು 5 ಲಕ್ಷ ರೂ.  ವೆಚ್ಚದಲ್ಲಿ ಶ್ರೀ ಗಣೇಶ ಮಂದಿರ ಕಟ್ಟಡ ನಿರ್ಮಾಣವಾಗಲಿದೆ.

Related Articles

Back to top button