Latest

ಏಷ್ಯನ್ ಕಪ್ 2023ರ ಆತಿಥ್ಯ ಯಾರ ಪಾಲಿಗೆ ಗೊತ್ತಾ?

ಪ್ರಗತಿವಾಹಿನಿ ಸುದ್ದಿ, ಕತಾರ್: 2022 ರ ಫಿಫಾ ವಿಶ್ವಕಪ್ ಆತಿಥ್ಯ ವಹಿಸಿದ ನಂತರ, ಕತಾರ್ ಏಷ್ಯನ್ ಕಪ್ 2023 ಗೆ ಆತಿಥ್ಯ ವಹಿಸಲಿದೆ ಎಂದು ಏಷ್ಯನ್ ಫುಟ್ಬಾಲ್ ಕಾನ್ಫೆಡರೇಶನ್ (ಎಎಫ್‌ಸಿ) ಹೇಳಿದೆ.

ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಮತ್ತು ಸೌದಿ ಅರೇಬಿಯನ್ ಫುಟ್ಬಾಲ್ ಫೆಡರೇಶನ್  ಕೂಡ ಪಂದ್ಯಾವಳಿಯ 2027 ರ ಆವೃತ್ತಿಗೆ ಅಂತಿಮ ಎರಡು ಬಿಡ್ಡರ್‌ಗಳಾಗಿ ಆಯ್ಕೆಯಾಗಿವೆ. 2027 ಕ್ಕೆ ಆದರೆ ಅತಿಥೇಯ ಕುರಿತ ನಿರ್ಧಾರವನ್ನು 2023 ರ ಫೆಬ್ರವರಿಯಲ್ಲಿ ಕೈಗೊಳ್ಳಲಾಗುತ್ತದೆ.

ಏಷ್ಯನ್ ಫುಟ್‌ಬಾಲ್ ಕಾನ್ಫೆಡರೇಶನ್ (ಎಎಫ್‌ಸಿ) ಕಾರ್ಯಕಾರಿ ಸಮಿತಿ ಕತಾರ್ ಫುಟ್‌ಬಾಲ್ ಅಸೋಸಿಯೇಷನ್ (ಕ್ಯೂಎಫ್‌ಎ) ನ್ನು ಎಎಫ್‌ಸಿ ಏಷ್ಯನ್ ಕಪ್ 2023 ರ ಆತಿಥೇಯ ಸಂಘ ಎಂದು ದೃಢಪಡಿಸಿದೆ.

11 ನೇ ಎಎಫ್‌ಸಿ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಎಎಫ್‌ಸಿ ಅಧ್ಯಕ್ಷ ಶೇಖ್ ಸಲ್ಮಾನ್ ಬಿನ್ ಇಬ್ರಾಹಿಂ ಅಲ್ ಖಲೀಫಾ ಕ್ಯೂಎಫ್‌ಎ ಅವರ ಯಶಸ್ವಿ ಬಿಡ್‌ಗೆ ಅಭಿನಂದಿಸಿದರು.

ಬೆಳಗಾವಿಯಲ್ಲಿ ಸುಸಜ್ಜಿತ ಸಾಂಸ್ಕೃತಿಕ ಭವನ ಅಗತ್ಯ – ಎಂ.ಕೆ.ಹೆಗಡೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button