ಪ್ರಗತಿ ವಾಹಿನಿ ಸುದ್ದಿ ಮುಂಬೈ –
ಭಾನುವಾರ ಸಂಜೆ ರಾಜಸ್ಥಾನ್ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜಾಯಿಂಟ್ಸ್ ನಡುವಿನ ಪ್ರಸಕ್ತ ಐಪಿಎಲ್ ಪಂದ್ಯದಲ್ಲಿ ಅಚ್ಚರಿಯ ವಿದ್ಯಮಾನ ನಡೆದಿದೆ. ರಾಜಸ್ಥಾನ ರಾಯಲ್ಸ್ ಆರ್. ಅಶ್ವಿನ್ ಬ್ಯಾಟಿಂಗ್ ಮಾಡುತ್ತಿದ್ದಾಗ ೧೯ನೇ ಓವರ್‌ನಲ್ಲಿ ಸ್ವತಃ ಔಟ್ (ರಿಟಾಯರ್ ಔಟ್ ) ಘೋಷಿಸಿಕೊಂಡು ಹೊರನಡೆದರು.
ಅಂಪಾಯರ್ ಔಟ್ ಎಂದು ಘೋಷಿಸದೆ ಬ್ಯಾಟ್ಸ್‌ಮನ್ ಸ್ವತಃ ತನಗೆ ತಾನೇ ಔಟ್ ಎಂದು ತೀರ್ಮಾನಿಸಿ ಹೊರ ನಡೆಯುವ ಅವಕಾಶ ಕ್ರಿಕೇಟ್ ನಿಯಮದಲ್ಲಿದೆ. ಆದರೆ ಇಂಥಹ ವಿದ್ಯಮಾನ ಕ್ರಿಕೇಟ್‌ನಲ್ಲಿ ಕಡಿಮೆ. ಆರ್. ಅಶ್ವಿನ್ ಇಡೀ ಐಪಿಎಲ್ ಇತಿಹಾಸದಲ್ಲೇ ರಿಟಾಯರ್ ಔಟ್ ಘೋಷಿಸಿಕೊಂಡ ಮೊದಲ ಆಟಗಾರನಾಗಿದ್ದಾರೆ. ಒಟ್ಟಾರೆ ಟಿ ೨೦ ಇತಿಹಾಸದಲ್ಲಿ ಐದನೇ ಆಟಗಾರನಾಗಿದ್ದಾರೆ.
ಸ್ಮಾರ್ಟ್ ಮೂವ್ ಎಂದ ಪ್ರೇಕ್ಷಕರು
ಪಂದ್ಯದ ೧೦ನೇ ಓವರ್‌ನಲ್ಲಿ ಆರ್. ಅಶ್ವಿನ್ ಫೀಲ್ಡಿಗೆ ಇಳಿಯುವ ವೇಳೆ ರಾಜಸ್ಥಾನ ರಾಯಲ್ಸ್ ತಂಡ ಕೇವಲ ೬೭ ರನ್‌ಗೆ ೪ ವಿಕೇಟ್ ಕಳೆದುಕೊಂಡು ದುಸ್ಥಿತಿಯಲ್ಲಿತ್ತು. ಅದರಲ್ಲೂ ಮೂರು ವಿಕೇಟ್‌ಗಳು ಕೇವಲ ೭ ರನ್ ಅಂತರದಲ್ಲಿ ಉರುಳಿದ್ದವು. ತಂಡಕ್ಕೆ ಉತ್ತಮ ಪಾರ್ಟನರ್‌ಶಿಪ್‌ನ ಅಗತ್ಯವಿತ್ತು. ಈ ಜವಾಬ್ದಾರಿಯನ್ನು ಆರ್. ಅಶ್ವಿನ್ ಸಮರ್ಥವಾಗಿ ನಿಭಾಯಿಸಿದರು.
ಹೇಟ್ಮೇರ್ ಜೊತೆ ೫ನೇ ವಿಕೇಟ್‌ನ ಜೊತೆಯಾಟದಲ್ಲಿ ಅವರು ೬೮ ರನ್ ಪೇರಿಸಿದರು. ವಯಕ್ತಿಕವಾಗಿ ೨೩ ಬಾಲ್‌ಗಳಲ್ಲಿ ೨೮ ರನ್ ಸಿಡಿಸಿದರು. ಆದರೆ ಓವರ್ ಮುಗಿಯುತ್ತ ಬಂದಂತೆ ಸೂಕ್ತ ಹೊಡಿ ಬಡಿ ಬ್ಯಾಟ್ಸ್ ಮನ್ ಕಣಕ್ಕಿಳಿಯಬೇಕಿತ್ತು. ಈ ಹಿನ್ನೆಲೆಯಲ್ಲಿ ಅಶ್ವಿನ್ ಸ್ವತಃ ಔಟ್ ಘೋಷಿಸಿಕೊಂಡರು. ಬಳಿಕ ಬ್ಯಾಟಿಂಗ್‌ಗೆ ಇಳಿದ ರಿಯಾನ್ ಪರಾಗ್ ಅಬ್ಬರದ ಸಿಕ್ಸರ್‌ಗಳನ್ನು ಸಿಡಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ೨೦ ಓವರ್‌ಗಳ ಅಂತ್ಯಕ್ಕೆ ತಂಡದ ಮೊತ್ತ ೬ ವಿಕೇಟ್ ನಷ್ಟಕ್ಕೆ ೧೬೫ಕ್ಕೆ ಏರಿತು. ಈ ಹಿನ್ನೆಲೆಯಲ್ಲಿ ಆರ್. ಅಶ್ವಿನ್‌ರ ನಡೆಯನ್ನು ಸ್ಮಾರ್ಟ್ ಮೂವ್ ಎಂದು ಕ್ರಿಕೇಟ್ ಪ್ರೇಮಿಗಳು ಹೇಳಿದ್ದಾರೆ.
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ರಾಜ್ಯದ 100 ಕ್ಕೂ ಅಧಿಕ ದೇವಸ್ಥಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ !
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ