Latest

ಒಟ್ಟಿಗೆ ವಿಷ ಸೇವಿಸಿದ ಆರು ಬಾಲಕಿಯರು: ಮೂವರ ಸಾವು, ಮೂವರ ಸ್ಥಿತಿ ಗಂಭೀರ; ಇದೆಂತ ವಿಚಿತ್ರ ದುರಂತ!

ಪ್ರಗತಿ ವಾಹಿನಿ ಸುದ್ದಿ, ಔರಂಗಾಬಾದ್ –

ಆರು ಮಂದಿ ಗೆಳತಿಯರು ಒಟ್ಟಿಗೆ ವಿಷ ಸೇವಿಸಿ ಮೂವರು ಮೃತಪಟ್ಟಿರುವ ಘಟನೆ ಬಿಹಾರದ ಔರಂಗಾಬಾದ್‌ನಲ್ಲಿ ನಡೆದಿದೆ. ಇನ್ನು ಮೂವರ ಪರಿಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Home add -Advt

ವಿಷ ಸೇವಿಸಿದ ಎಲ್ಲ ಬಾಲಕಿಯರ ವಯಸ್ಸು ೧೪-೧೬ ಒಳಗಿದೆ. ಗೆಳತಿಯರ ಪೈಕಿ ಓರ್ವ ಬಾಲಕಿ ತನ್ನ ಸೋದರ ಮಾವನನ್ನು ಪ್ರೀತಿಸುತ್ತಿದ್ದಳು. ಐವರು ಗೆಳತಿಯರೊಂದಿಗೆ ತೆರಳಿ ಆಕೆ ಸೋದರ ಮಾವನಿಗೆ ತನ್ನ ಪ್ರೀತಿಯ ವಿಚಾರ ಹೇಳಿದ್ದಳು. ಆದರೆ ಆತ ಅದನ್ನು ತಿರಸ್ಕರಿಸಿದ್ದರಿಂದ ಮನ ನೊಂದಿದ್ದಳು.

ಸೋದರ ಮಾವನನ್ನು ಪ್ರೀತಿಸುತ್ತಿದ್ದ ಬಾಲಕಿ ವಿಷ ಸೇವಿಸಲು ಮುಂದಾದಾಗ ಜೊತೆಗಿದ್ದ ಇತರ ಬಾಲಕಿಯರೂ ವಿಷ ಸೇವಿಸಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ ಎಂದು ಔರಂಗಾಬಾದ್‌ನ ಎಸ್‌ಪಿ ಕಾಂತೇಶ್ ಮಿಶ್ರಾ ಹೇಳಿಕೆ ನೀಡಿದ್ದಾರೆ.

ಸ್ವತಃ ಔಟ್ ಘೋಷಿಸಿಕೊಂಡು ಹೊರನಡೆದ ಆರ್. ಅಶ್ವಿನ್: ಐಪಿಎಲ್‌ನಲ್ಲೊಂದು ಅಚ್ಚರಿಯ ವಿದ್ಯಮಾನ

Related Articles

Back to top button