Latest

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ರಾಜ್ಯದ 100 ಕ್ಕೂ ಅಧಿಕ ದೇವಸ್ಥಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ !

 ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಸನಾತನ ಸಂಸ್ಥೆಯ ಸಂಸ್ಥಾಪಕರಾಗಿರುವ ಪರಾತ್ಪರ ಗುರು ಡಾಕ್ಟರ್ ಜಯಂತ ಅಠವಲೆಯವರ ಜನ್ಮೋತ್ಸವದ ನಿಮಿತ್ತ, ದೇಶದಲ್ಲೆಡೆ  ಶ್ರೀರಾಮನವಮಿಯ ಶುಭದಿನದಂದು ಬೆಂಗಳೂರು ೧೫ ದೇವಸ್ಥಾನಗಳಲ್ಲಿ, ರಾಜ್ಯದ ೧೦೦ ದೇವಸ್ಥಾನಗಳಲ್ಲಿ ವಿಶೇಷ ಪೂಜೆಯೊಂದಿಗೆ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಲಾಯಿತು ಎಂದು ಹಿಂದೂ ಜನಜಾಗೃತಿ ಸಮಿತಿ, ಕರ್ನಾಟಕದ ರಾಜ್ಯ ವಕ್ತಾರ  ಮೋಹನ ಗೌಡ ತಿಳಿಸಿದ್ದಾರೆ.
ಈ ಸಂಧರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿ, ಅನೇಕ ಹಿಂದೂಪರ ಸಂಘಟನೆಗಳ ಮುಖಂಡರು ಉಪಸ್ಥಿತಿ ಇದ್ದರು.

ಶ್ರೀರಾಮನವಮಿಯಿಂದ ಅಕ್ಷಯ ತೃತೀಯ ವರೆಗೆ ಇಡೀ ದೇಶದಾದ್ಯಂತ ಭಾರತದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು, ಹಿಂದೂ ರಾಷ್ಟ್ರದ ಸ್ಥಾಪನೆಯ ಅಡಚಣೆಗಳು ದೂರವಾಗಬೇಕು, ಹಿಂದೂ ರಾಷ್ಟ್ರದ ಸ್ಥಾಪನೆ ಕಾರ್ಯ ಮಾಡುವ ಹಿಂದೂ ಕಾರ್ಯಕರ್ತರ ರಕ್ಷಣೆಯಾಗಬೇಕೆಂದು ಅಭಿಯಾನವನ್ನು ಇಡೀ ದೇಶದಾದ್ಯಂತ ಮಾಡಲಾಗುತ್ತಿದೆ. ಈ ಸಮಯದಲ್ಲಿ ದೇಶದಾದ್ಯಂತ ವಿಶೇಷ ಪೂಜೆಗಳು ನಡೆಯಲಿದೆ.

Home add -Advt

ಬೆಂಗಳೂರಿನ ವಿಜಯನಗರದ ಕೋದಂಡ ರಾಮಸ್ವಾಮಿ ದೇವಸ್ಥಾನ, ಸಂಕಷ್ಟಹರ ಗಣಪತಿ ದೇವಸ್ಥಾನ, ಮಲ್ಲೇಶ್ವರಂ ನ ಶ್ರೀ ಗಣೇಶ ದೇವಸ್ಥಾನ, ಬಸವೇಶ್ವರ ನಗರ  ಸೇರಿದಂತೆ ೧೫ ಕ್ಕೂ ವಿವಿಧ ದೇವಸ್ಥಾನಗಳಲ್ಲಿ ಸ್ಥಳೀಯ ಹಿಂದುತ್ವವಾದಿಗಳು, ಹಿಂದೂ ಧರ್ಮಪ್ರೇಮಿಗಳು ಒಟ್ಟು ಸೇರಿ, ‘ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಉತ್ತಮ ಆರೋಗ್ಯಕ್ಕಾಗಿ ಮತ್ತು  ಹಿಂದೂ ರಾಷ್ಟ್ರ ಸ್ಥಾಪನೆಗೆ ಬರುವ ಅಡಚಣೆಗಳು ದೂರವಾಗಲಿ ಎಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು..

 
 

Related Articles

Back to top button