Latest

138 ಚಕ್ರದ ಲಾರಿಯ ಭಾರ ತಾಳಲಾರದೆ ಮುರಿದು ಬಿದ್ದ ಸೇತುವೆ

ಪ್ರಗತಿ ವಾಹಿನಿ ಸುದ್ದಿ ನರ್ಮದಾಪುರಂ

೧೩೮ ಚಕ್ರದ ಬೃಹತ್ ಲಾರಿ ದಾಟುತ್ತಿರುವಾಗ ಭಾರ ತಾಳಲಾರದೆ ಸೇತುವೆಯೊಂದು ಮುರಿದು ಬಿದ್ದ ಘಟನೆ ಮಧ್ಯಪ್ರದೇಶದ ನರ್ಮದಾಪುರಂನಲ್ಲಿ ನಡೆದಿದೆ.

ಈ ಅಗಾಧ ಗಾತ್ರದ ಲಾರಿಯು ಹೈದರಾಬಾದ್‌ನಿಂದ ಮಧ್ಯಪ್ರದೇಶದ ನರ್ಮದಾಪುರಂ ಬಳಿಯ ಇತಾರ್ಸಿಗೆ ಭಾರಿ ಗಾತ್ರದ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳನ್ನು ಸಾಗಿಸುತ್ತಿತ್ತು.

೨೫ ಅಡಿ ಉದ್ದದ ಈ ಸೇತುವೆಯ ಅಡಿಗೆ ಹರಿಯುತ್ತಿರುವ ಹೊಳೆ ಬತ್ತಿರುವುದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಅಲ್ಲದೆ ಲಾರಿ ಸೇತುವೆಯ ಮೇಲೆ ಬಂದಾಗ ಬೇರೆ ಯಾವುದೇ ವಾಹನ ಇರಲಿಲ್ಲ. ಲಾರಿ ಚಾಲಕ ಬ್ರಿಜ್ ಮುರಿದುಬೀಳುತ್ತಿದ್ದಂತೆ ಪರಾರಿಯಾಗಿದ್ದಾನೆ. ಚಾಲಕನ ಜೊತೆ ಲಾರಿಯಲ್ಲಿದ್ದ ಇತರ ಐವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ನರ್ಮದಾಪುರಂನ ಅಡಿಷನಲ್ ಎಸ್‌ಪಿ ಅವಧೇಶ್ ಪ್ರತಾಪ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ರೊಚ್ಚಿಗೆದ್ದ ಕಾರ್ಯಕರ್ತರು: ಸಭೆಯಿಂದ ಎದ್ದು ಹೋದ ಕುಮಾರಸ್ವಾಮಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button