Latest

ಗುರಿ ತಪ್ಪಿ ಕಾಲಿಗೆ ಬಿದ್ದ ಗುಂಡೇಟು; ವ್ಯಕ್ತಿ ಸಾವು

ಪ್ರಗತಿವಾಹಿನಿ ಸುದ್ದಿ; ಮೈಸೂರು: ಮೊಲ ಬೇಟೆಗೆ ಹಾರಿಸಿದ ಗುಂಡು ತಗುಲಿ ಕಾರ್ಮಿಕನೋರ್ವ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ಸಂಭವಿಸಿದೆ.

ಇಲ್ಲಿನ ಕಾರ್ಯ ಎಂಬ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಪ್ರಸನ್ನ ಎಂಬುವವರು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಕಾಡುಮೊಲ ಬೇಟೆಯಾಡಲೆಂದು ನಿಶಾಸ್ ಎಂಬಾತ ಬಂದೂಕಿನಿಂದ ಗುಂಡು ಹಾರಿಸಿದ್ದ. ಗುರಿ ತಪ್ಪಿದ ಪರಿಣಾಮ ಪ್ರಸನ್ನ ಎಂಬುವವರ ಕಾಲಿಗೆ ತಗುಲಿದೆ.

Home add -Advt

ಗಂಭೀರವಾಗಿ ಗಾಯಗೊಂಡಿದ್ದ ಪ್ರಸನ್ನರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಪ್ರಸನ್ನ ಕೊನೆಯುಸಿರೆಳೆದಿದ್ದಾರೆ. ಹಲ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಗಾವಿಯ 418 ಗ್ರಾಮಗಳು ಕೋವಿಡ್ ಮುಕ್ತ ; ಪಂಚಾಯಿತಿಗೊಂದು ಕೆರೆ ಅಭಿವೃದ್ಧಿ

Related Articles

Back to top button