Kannada NewsLatestNational
ಕ್ರಿಕೆಟ್ ಬೆಟ್ಟಿಂಗ್ ದಾಳಿ: ಓರ್ವನ ಬಂಧನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಇಂದು ಮುಂಜಾನೆ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಸದಾಶಿವ ನಗರ ಸ್ಮಶಾನ ರಸ್ತೆಯಲ್ಲಿ ಅಪಘಾನಿಸ್ತಾನ ಮತ್ತು ಇಂಗ್ಲೆಂಡ್ ಮಧ್ಯೆ ನಡೆಯಲಿರುವ ಕ್ರಿಕೆಟ್ ಪಂದ್ಯದ ಫಲಿತಾಂಶದ ಮೇಲೆ ಸಾರ್ವಜನಿಕರ ಸ್ಥಳದಲ್ಲಿ ಹಣ ಕಟ್ಟಿಸಿಕೊಂಡು ಬೆಟ್ಟಿಂಗ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಶಹಾಪುರ ಜೇಡರ ಗಲ್ಲಿಯ ರಮೇಶ ದೊಂಗಡೆ ಎನ್ನುವವನನ್ನು ಬಂಧಿಸಿ, 25,020 ರೂ. ನಗದು ವಶಪಡಿಸಿಕೊಳ್ಳಲಾಗಿದ್ದು, ಇನ್ನುಳಿದ ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ.
ಸಿಸಿಬಿ ಘಟಕದ ಪಿಐ ಗುರುರಾಜ ಕಲ್ಯಾಣಶೆಟ್ಟಿ ಹಾಗೂ ಅವರ ತಂಡದ ಎಚ್. .ಎಚ್. ನಿಸ್ಸುನ್ನವರ, ಐ.ಎಸ್. ಪಾಟೀಲ, ಎಸ್. ಎಂ. ಭಜಂತ್ರಿ, ಯಾಸೀನ್ ನಧಾಪ ದಾಳಿ ನಡೆಸಿದರು.




