Kannada NewsLatest

ನಂಬರ್ ಪ್ಲೇಟ್ ವಿರುದ್ಧ ಪೊಲೀಸರ ಕಾರ್ಯಾಚರಣೆ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 

Home add -Advt

ಡಿಫೆಕ್ಟಿವ್ ಮತ್ತು ಖೊಟ್ಟಿ ನಂಬರ ಪ್ಲೆಟ್‌ಗಳನ್ನು ಬಳಸಿದವರ ವಿರುದ್ದ ಕಾರ್ಯಾಚರಣೆ ನಡೆಸಿದ  ಬೆಳಗಾವಿ ನಗರ ಸಂಚಾರ ವಿಭಾಗದ ಪೊಲೀಸ್  ಸಿಬ್ಬಂದಿ  ಒಟ್ಟು 386 ಪ್ರಕರಣ ದಾಖಲಿಸಿದ್ದಾರೆ. 
ಬೆಳಗಾವಿ ನಗರ ಪ್ರದೇಶ ವ್ಯಾಪ್ತಿಯಲ್ಲಿ ಮೋಟಾರ ಸೈಕಲ್ ಮತ್ತು ಆಟೋರಿಕ್ಷಾ ಮಾದರಿಯ ವಾಹನಗಳಿಗೆ ಡಿಫೆಕ್ಟಿವ್ (ದೋಷಯುಕ್ತ) ನಂಬರ ಪ್ಲೆಟ್ ಮತ್ತು ನಕಲಿ ನಂಬರ ಪ್ಲೆಟ್‌ಗಳನ್ನು ಅಳವಡಿಸಿಕೊಂಡು ಸಂಚರಿಸುತ್ತಿದ್ದ ವಾಹನಗಳ ವಿರುದ್ಧ 3 ದಿನ ಕಾರ್ಯಾಚರಣೆ ನಡೆಸಲಾಯಿತು. 

ಸಂಚಾರ ವಿಭಾಗದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ  ವಿಶೇಷ ಕಾರ್ಯಾಚರಣೆ ನಡೆಸಿ  ಒಟ್ಟು 386 ವಾಹನಗಳ ಚಾಲಕ/ಮಾಲಿಕರ ವಿರುದ್ಧ ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿ ಒಟ್ಟು  38,600 ರೂ. ದಂಡ ವಿಧಿಸಿದ್ದಾರೆ.

Related Articles

Back to top button