Kannada NewsKarnataka NewsLatest

ಲಕ್ಷ್ಮಿ ಹೆಬ್ಬಾಳಕರ್ ಪಾಕ ಶಾಲೆಯಲ್ಲಿ ರೆಡಿಯಾಯ್ತು ರಾಜಸ್ತಾನಿ ಫುಡ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಪಾಕ ಶಾಲೆಯಲ್ಲಿ ರಾಜಸ್ತಾನಿ ಫುಡ್ ರೆಡಿಯಾಗಿದೆ. ಬೆಳಗ್ಗೆ ಕೊಟ್ಟ ಮಾತನ್ನು ಸಂಜೆಯೇ ಈಡೇರಿಸಿದ್ದಾರೆ.

ದಾರಿ ತಪ್ಪಿ ಬೆಂಗಳೂರಿನಿಂದ ಬೆಳಗಾವಿಗೆ ಬಂದಿರುವ ರಾಜಸ್ತಾನ ಮತ್ತು ಉತ್ತರ ಭಾರತದ ಇತರ ರಾಜ್ಯಗಳ ಕಾರ್ಮಿಕರಿಗೆ ಅವರದೇ ರುಚಿಯ ಊಟ ಕೊಡಿಸುವುದಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಬೆಳಗ್ಗೆ ಭರವಸೆ ನೀಡಿದ್ದರು.

Home add -Advt

ಅದರಂತೆ ಸಂಜೆಯ ಹೊತ್ತಿಗೆ ತಮ್ಮದೇ ಖರ್ಚಿನಲ್ಲಿ ದಾಲ್, ರೋಟಿ ಸೇರಿದಂತೆ ಅವರಿಗೆ ರುಚಿಸುವ ಊಟ ತಯಾರಿಸಿ ಬಡಿಸಿದ್ದಾರೆ. ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.

ಲಕ್ಷ್ಮಿ ಹೆಬ್ಬಾಳಕರ್ ಅವರ ಮಾನವೀಯತೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಸಂಬಂಧಿಸಿದ ಸುದ್ದಿ ಓದಿ –

ಯಾರದ್ದೋ ಬೇಜವಾಬ್ದಾರಿ: ಲಕ್ಷ್ಮಿ ಹೆಬ್ಬಾಳಕರ್ ಮಾನವೀಯತೆ

 

https://youtu.be/P9IvdLN1r0U

 

Related Articles

Back to top button