22 ದಿನಗಳಿಂದ ಹೋಟೆಲ್ ನಲ್ಲೇ ಲಾಕ್ ಆದ ಹಿರಿಯ ನಟಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಭೀತಿ ಹಿನ್ನಲೆಯಲ್ಲಿ ಇಂದಿನಿಂದ ಲಾಕ್ ಡೌನ್ ಮತ್ತೆ ವಿಸ್ತರಣೆಯಾಗಿದೆ. ಈ ನಡುವೆ ಕನ್ನಡದ ಹಿರಿಯ ನಟಿಯೊಬ್ಬರು ಲಾಕ್ ಡೌನ್ ಶುರುವಾದಾಗಿನಿಂದ ಹೋಟೆಲ್ ಒಂದರಲ್ಲೇ ಸಿಲುಕಿದ್ದಾರೆ.

ಹೌದು. ಕನ್ನಡ ಚಿತ್ರರಂಗದ ಹಿರಿಯ ನಟಿ, ಅಭಿನಯ ಶಾರದೆ ಜಯಂತಿ ಅವರು ಕಳೆದ 22 ದಿನಗಳಿಂದ ಹಂಪಿಯ ಹೋಟೆಲ್ ಒಂದರಲ್ಲಿ ಸಿಲುಕಿಕೊಂಡಿದ್ದಾರೆ.

Home add -Advt

ಕಳೆದ ಮಾರ್ಚ್ 22 ರಂದು ವಿಶ್ವ ವಿಖ್ಯಾತ ಹಂಪಿ ದೇವಸ್ಥಾನ ನೋಡಲು ಕುಟುಂಬ ಸಮೇತ ಜಯಂತಿ ಹಂಪಿಗೆ ತೆರಳಿದ್ದರು. ಆಗ ಕರ್ನಾಟಕದಲ್ಲಿ ಹೆಚ್ಚಾಗಿ ಕೊರೊನಾ ವೈರಸ್ ವ್ಯಾಪಿಸಿರಲಿಲ್ಲ. ಆದರೆ ಜಯಂತಿ ಕುಟುಂಬ ಪ್ರವಾಸದಲ್ಲಿದ್ದಾಗಲೇ ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ಮಾಡಲು ಸರ್ಕಾರ ಆದೇಶಿಸಿತ್ತು. ಹೀಗಾಗಿ ಹೊಸಪೇಟೆಯಲ್ಲಿರುವ ಖಾಸಗಿ ಹೊಟೇಲ್‍ವೊಂದರಲ್ಲಿ ಜಯಂತಿ, ಅವರ ಪುತ್ರ, ಜಯಂತಿ ಸಹೋದರ, ಅವರ ಪತ್ನಿ ಸೇರಿದಂತೆ ಕುಟುಂಬ ಸದಸ್ಯರು ಉಳಿದುಕೊಂಡಿದ್ದರು.

ಲಾಕ್‍ಡೌನ್ ಆದ ನಂತರ ಜಯಂತಿ ಕುಟುಂಬ ಬೆಂಗಳೂರಿಗೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಅಂದಿನಿಂದ ಹೊಟೇಲ್‍ನಲ್ಲಿಯೇ ಇದ್ದಾರೆ. ಇಂದು 21 ದಿನದ ಲಾಕ್‍ಡೌನ್ ಮುಗಿದಿದ್ದು, ಬೆಂಗಳೂರಿಗೆ ವಾಪಸ್ ಬರಬಹುದು ಎಂದುಕೊಂಡಿದ್ದರು. ಆದರೆ ಪ್ರಧಾನಿ ಮೋದಿ ಅವರು ಇಂದು ಮತ್ತೆ ಮೇ 3ರ ವರೆಗೂ ಲಾಕ್‍ಡೌನ್ ವಿಸ್ತರಣೆ ಮಾಡಿ ಅಧಿಕೃತವಾಗಿ ಫೋಷಣೆ ಮಾಡಿದ್ದಾರೆ. ಹೀಗಾಗಿ ಇನ್ನೂ 19 ದಿನಗಳ ಕಾಲ ಹೊಟೇಲ್‍ನಲ್ಲೇ ಉಳಿದುಕೊಳ್ಳುವ ಅನಿವಾರ್ಯತೆ ಉಂಟಾಗಿದೆ.

Related Articles

Back to top button