Politics

*ಸದನದಲ್ಲಿ ಅಹೋರಾತ್ರಿ ಧರಣಿ ಅಲ್ಲ, ಹಾಡು ಹಾಡಿ, ಮೋಜು ಮಾಡಿದ್ದಾರೆ; ಬಿಜೆಪಿ-ಜೆಡಿಎಸ್ ಧರಣಿಗೆ ರಾಮಲಿಂಗಾರೆಡ್ಡಿ ಕಿಡಿ*

ಪ್ರಗತಿವಾಹಿನಿ ಸುದ್ದಿ: ಮುಡಾ ಅಕ್ರಮ ಪ್ರಕರಣಗಳ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಸದಸ್ಯರು ಸದನದಲ್ಲಿ ಅಹೋರಾತ್ರಿ ಧರಣಿ ನಡೆಸಿದ ವಿಚಾರವಾಗಿ ಕಿಡಿ ಕಾರಿದ ಸಚಿವ ರಾಮಲಿಂಗಾರೆಡ್ಡಿ, ಅವರು ಸದಾದಲ್ಲಿ ಅಹೋರಾತ್ರಿ ಧರಣಿ ನಡೆಸಿಲ್ಲ, ಹಾಡು ಹಾಡಿ, ತಾಳ ತಟ್ಟಿ ಮೋಜು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, ಬಿಜೆಪಿ, ಜೆಡಿಎಸ್ ನವರು ಅಹೋರತರಿ ಧರಣಿ ಹೆಸರಲ್ಲಿ ತಮ್ಮ ಖುಷಿಗಾಗಿ ಹಾಡು, ಭಜನೆ ಹಾಡಿ, ತಾಳ ತಟ್ಟಿ ಕುಣಿದಿದ್ದಾರೆ. ಇದನ್ನು ಧರಣಿ ಎನಲ್ಲ, ಮೋಜು ಮಾಡಿದ್ದಾರೆ ಎಂದು ಕಿಡಿಕಾರಿದರು.

ಮುಡಾ ನಿವೇಶನ ಹಂಚಿಕೆ ಬಿಜೆಪಿ ಅವಧಿಯಲ್ಲಿಯೇ ಆಗಿರುವುದು. ಆಗ ಯಾಕೆ ತನಿಖೆ ನಡೆಸಿಲ್ಲ? ಐದು ವರ್ಷ ಬಿಜೆಪಿ ಆಡಳಿತದಲ್ಲಿಯೇ ಮುಡಾ ನಿವೇಶನ ಹಂಚಿಕೆಯಾಗಿದೆ. ಇವರು ಯಾಕೆ ತನಿಖೆ ನಡೆಸಿಲ್ಲ ಈಗ ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿದ್ದಾರೆ? ಈಗಾಗಲೇ ವಾಲ್ಮೀಕಿ ನಿಗಮದ ಹಗರಣ, ಮುಡಾ ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖೆ ನಡೆಯುತ್ತಿರುವಾಗ ಸಿಬಿಐಗೆ ಕೊಡಬೇಕು ಎಂದು ಆಗ್ರಹಿಸಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಹೇಳಿದರು.

Home add -Advt


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button