Kannada NewsKarnataka NewsPolitics

*ಪೆನ್ ಡ್ರೈವ್ ಕೇಸ್; HDK ಭೇಟಿಯಾದ ದೇವರಾಜೇಗೌಡ*

ಪ್ರಗತಿವಾಹಿನಿ ಸುದ್ದಿ: ಪೆನ್ ಡ್ರೈವ್ ಕೇಸ್ ಗೆ ಸಂಬಂಧಿಸಿದಂತೆ ಆರೋಪಿ ವಕೀಲ ದೇವರಾಜೇಗೌಡ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

ಜಾಮೀನು ಮೇಲೆ ಜೈಲಿನಿಂದ ಬಿಡುಗಡೆಯಾದ ಬಳಿಕ ಇದೇ ಮೊದಲ ಬಾರಿಗೆ ದೆಹಲಿಯ ಕರ್ನಾಟಕ ಭವನದಲ್ಲಿ ದೇವರಾಜೇಗೌಡ, ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದಾರೆ.

Home add -Advt

ಭೇಟಿ ಬಳಿಕ ಮಾತನಾಡಿದ ದೇವರಾಜೇಗೌಡ, ಪೆನ್ ಡ್ರೈವ್ ಪ್ರಕರಣ ವಿಚಾರವಾಗಿ ಭೇಟಿಯಾಗಿದ್ದೆ. ಪೆನ್ ಡ್ರೈವ್ ಹಂಚಿಕೆಯಲ್ಲಿ ನನ್ನ ಪಾತ್ರವಿಲ್ಲ. ಎಸ್ ಐಟಿ ತನಿಖೆ ನಡೆಯುತ್ತಿದೆ. ಖಾಸಗಿಯಾಗಿಯೂ ತನಿಖೆ ನಡೆದಿದೆ. ನನ್ನ ಪಾತ್ರವಿಲ್ಲ ಎಂಬುದು ಗೊತ್ತಾಗಿದೆ. ಯಾರು ಹಂಚಿಕೆ ಮಾಡಿದ್ದು ಎಂಬುದು ತಿಳಿದುಬಂದಿದೆ ಎಂದರು.

ಇನ್ನು ನಾನು ದೇವೇಗೌಡರ ಬಗ್ಗೆ ಯಾವತ್ತೂ ಮಾತನಾಡಿಲ್ಲ. ರೇವಣ್ಣ ವಿರುದ್ಧ ಹೋರಾಡಿಲ್ಲ, ಆದರೆ ಅವರ ಕೆಟ್ಟ ಗುಣಗಳ ವಿರುದ್ಧ ಹೋರಾಟ ನಡೆಸಿದ್ದೇನೆ. ಈಗ ಅವರಿಗೂ ಪಶ್ಚಾತ್ತಾಪವಾಗಿದೆ ಎಂದರು.

Related Articles

Back to top button