*ಮತಾಂತರ ತಡೆಗಟ್ಟಲು ಮಠಾಧೀಶರುಗಳು ಮುಂದಾಗಬೇಕು: ರಂಭಾಪುರಿ ಶ್ರೀ ಕರೆ*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲಿ ಮತಂತಾರ ನಡೆಯುತ್ತಿದೆ. ಆರ್ಥಿಕ ಸಮಸ್ಯೆಯನ್ನು ಬಗೆಹರಿಸುವ ಆಮಿಷವೊಡ್ಡಿ ಮತಾಂತರ ನಡೆಯುತ್ತೀರುವುದು ವಿಷಾದನೀಯವೆಂದು ರಂಭಾಪುರಿ ಪೀಠದ ಜಗದ್ಗುರು ಶ್ರೀ ವೀರಸೋಮೇಶ್ವರ ಶಿವಾಚಾರ್ಯ ಭಗವಾತ್ಪದರು ತಿಳಿಸಿದರು.
ವಿಜಯನಗರದ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ನಡೆಯುತ್ತೀರುವ 24 ನೇ ಆಷಾಡ ಮಾಸದ ಶಿವಪೂಜೆ ಮತ್ತು ಧಾರ್ಮಿಕ ಸಮಾರಂಭದ 4ನೇ ದಿನದ ಧರ್ಮಗೋಷ್ಠಿಯಲ್ಲಿ ದಿವ್ಯಸಾನ್ನಿಧ್ಯ ವಹಿಸಿ ಆರ್ಶೀವಚನ ಮಾಡಿದ ಸಂದರ್ಭದಲ್ಲಿ ಮಾತನಾಡಿದರು.
ಕಾಣದ ಕೈಗಳು ಮತಾಂತರದ ಹೀನಕೃತ್ಯ ಮಾಡುತ್ತಿದೆ. ಅಂತಹ ಕೃತ್ಯವನ್ನು ತಡೆಗಟ್ಟುವಲ್ಲಿ ನಮ್ಮ ಪಂಚಪೀಠಗಳು ಮುಂದಾಗಿದೆ. ಹಾಗೆಯೇ ಹಿಂದೂ ಧರ್ಮದ ಎಲ್ಲ ಮಠಾಧೀಶರುಗಳು ಮುಂದಾಗಬೇಕು ಎಂದು ಕರೆನೀಡಿದರು. ಹಿಂದೂಧರ್ಮದ ಆಚಾರ ವಿಚಾರ ಸಂಸ್ಕೃತಿಯನ್ನು ನಮ್ಮ ಮಕ್ಕಳಿಗೆ ತಿಳಿಸಿಕೊಡಬೇಕು ಎಂದು ಕಿವಿಮಾತು ಹೇಳಿದರು.
ಮನುಷ್ಯ ಯಂತ್ರದಂತೆ ದುಡಿದು ಸಂತೃಪ್ತಿಯನ್ನ ಕಳೆದುಕೊಳ್ಳುತ್ತಿದ್ದಾನೆ. ದುಡಿಯುವ ಭರದಲ್ಲಿ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾನೆ. ಆರೋಗ್ಯ ಸಂಪತ್ತು ಕಾಪಾಡಿಕೊಳ್ಳಿ. ಆರೋಗ್ಯ ಭಾಗ್ಯ ಇರಲಿ ಎಂದು ಹಾರೈಸಿದರು. ಮಕ್ಕಳಿಗೆ ಶಿಕ್ಷಣದ ಜೊತೆಗೆ ಧರ್ಮದ ಶಿಕ್ಷಣ ಕೊಡಬೇಕಾಗಿದೆ. ಯುವಜನಾಂಗ ನೆನೆಗುದಿಯಿಂದ ಬದುಕುತ್ತಿದ್ದಾರೆ. ಯುವಜನಾಂಗ ಸದೃಢವಾಗಬೇಕಾಗಿದೆ. ಅವಿಭಕ್ತ ಕುಟುಂಬ ಈ ಹಿಂದೆ ಇತ್ತು. ಇವತ್ತು ಮರೆಯಾಗುತ್ತಿದೆ. ಇದರಿಂದ ಇವತ್ತು ಸಂಬಂಧಗಳು ದೂರವಾಗುತ್ತಿವೆ.
ಧರ್ಮವೆಂದರೆ ಒಂದುಗೂಡಿಸುವುದು ಬೇರೆ ಬೇರೆ ಮಾಡುವುದಲ್ಲ. ಧರ್ಮವೆಂದರೆ ಸಣ್ಣ ಸೂಜಿಯಂತೆ ಎಲ್ಲರನ್ನೂ ಸೆಳೆಯುವ ಕೆಲಸಾಗಬೇಕಾಗಿದೆ.
ಎಲ್ಲ ಧರ್ಮಗಳಲ್ಲೂ ನೀತಿ ಸಂಹಿತೆ ಇದೆ. ಅದನ್ನ ಪಾಲಿಸಬೇಕು ಎಂದರು. ಇಂದಿನ ಧಾರ್ಮಿಕ ಕಾರ್ಯಕ್ರಮದಲ್ಲಿ ದೂಡ್ಡಗುಣಿಮಠದಶ್ರೀಗಳು, ಸಿದ್ದರಬೆಟ್ಟದಶ್ರೀಗಳು, ಡಾ.ಮಹಾಂತೇಶ್ ಹೀರೇಮಠ್. ವಿಜಯವಾಣಿ ಸಂಪಾದಕ ಚನ್ನೇಗೌಡ, ಕನ್ನಡ ಮತ್ತು ಸಂಸ್ಕತಿ ಇಲಾಖೆಯ ನಿರ್ದೇಶಕ ಡಾ.ಬಿ.ಎಸ್.ಮಂಜುನಾಥಸ್ವಾಮಿ, ಕೆಎಎಸ್ ಆಧಿಕಾರಿ ವಿಶ್ವನಾಥ ಹೀರೇಮಠ್ ಹಾಜರಿದ್ದರು.




