Kannada NewsKarnataka News

ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣ: ಪ್ರಶಾಂತ ಸಂಬರ್ಗಿಗೆ ಬೆದರಿಕೆ ಕರೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಸದಾ ಒಂದಿಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿ ಇರುವ ಸಾಮಾಜೀಕ ಹೋರಾಟಗಾರ ಪ್ರಶಾಂತ ಸಂಬರ್ಗಿ ಅವರಿಗೆ ಅಂತರಾಷ್ಟ್ರೀಯ ನಂಬರ್ ಮೂಲಕ ಬೆದರಿಕೆ ಕರೆ ಬಂದಿದ್ದು ಸಂಬರ್ಗಿ ಅವರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

ಇತ್ತಿಚಿಗೆ ಸಾಮಾಜಿಕ ಹೋರಾಟಗಾರ ಪ್ರಶಾಂತ ಸಂಬರ್ಗಿ ಅವರು ಬೆಂಗಳೂರಿನ ರಾಮೇಶ್ವರಂ ಕೆಫೆಗೆ ತೆರಳಿದ್ದರು, ರಾಮೇಶ್ವರಂ ಕೆಫೆಗೆ ತೆರಳಿದ ವಿಚಾರ ಪ್ರಸ್ತಾಪಿಸಿ ದುಷ್ಕರ್ಮಿಗಳು ಬೆದರಿಕೆ ಕರೆ ಮಾಡಿದ್ದಾರೆ.

Home add -Advt

ಅಂತರಾಷ್ಟ್ರೀಯ ನಂಬರ್ ನಿಂದ ಬೆದರಿಕೆ ಕರೆ ಹಾಗೂ ವಾಟ್ಸಫ್ ಸಂದೇಶ ರವಾನಿಸಿರುವ ದುಷ್ಕರ್ಮಿಗಳು ಆಸೀಡ್ ಹಾಕಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಹಾಗಾಗಿ ಬೆಂಗಳೂರಿನ ಚನ್ನಮ್ಮನ ಕೆರೆ ಪೊಲೀಸ್ ಠಾಣೆಗೆ ಪ್ರಶಾಂತ್ ಸಂಬರ್ಗಿ ದೂರು ನೀಡಿದ್ದಾರೆ.‌ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಕೆ ಆರಂಭಿಸಿದ್ದಾರೆ.

Related Articles

Back to top button