Kannada News

ರಾಮದುರ್ಗ ಕಾಂಗ್ರೆಸ್ ನಲ್ಲಿ ಅಶೋಕ ಪಟ್ಟಣ ವಿರುದ್ಧ ಬಂಡಾಯ; ಬೇಕಾದವರಿಗೆ ಟಿಕೆಟ್ ಘೋಷಿಸಲು ಸಿದ್ದರಾಮಯ್ಯ ಹೈಕಮಾಂಡ್ ಅಲ್ಲ ಎಂದ ಆಕಾಂಕ್ಷಿಗಳು

ಪ್ರಗತಿವಾಹಿನಿ ಸುದ್ದಿ, ರಾಮದುರ್ಗ: “ಬೇಕಾದವರಿಗೆ ಟಿಕೆಟ್ ಘೋಷಿಸಲು ಸಿದ್ದರಾಮಯ್ಯ ಅವರು ಪಕ್ಷದ ಹೈಕಮಾಂಡ್ ಅಲ್ಲ, ಯಾವುದೆ ಕಾರಣಕ್ಕೂ ರಾಮದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಅಶೋಕ ಪಟ್ಟಣ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಬಾರದು. ಕಾಂಗ್ರೆಸ್ ಪಕ್ಷಕ್ಕೆ ದುಡಿದು ಪಕ್ಷ ಕಟ್ಟಿದ ನೂತನ ಐವರು ಟಿಕೆಟ್ ಆಕಾಂಕ್ಷಿಗಳಲ್ಲಿ ಯಾರಾದರೂ ಒಬ್ಬರಿಗೆ ಟಿಕೆಟ್ ನೀಡಬೇಕು” ಎಂದು ಟಿಕೆಟ್ ಆಕಾಂಕ್ಷಿಗಳು ಪಕ್ಷದ ಹೈಕಮಾಡ್ ಗೆ ಮನವಿ ಮಾಡಿದ್ದಾರೆ.

Home add -Advt

“ಡಿ.ಕೆ. ಶಿವಕುಮಾರ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದು ಅವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ರಾಮದುರ್ಗ ಮಾಜಿ ಶಾಸಕ ಅಶೋಕ ಪಟ್ಟಣ ಅವರು ಕ್ಷೇತ್ರದಲ್ಲಿ ನಿರೀಕ್ಷಿತವಾಗಿ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಅವರಿಗೆ ಟಿಕೇಟ್ ನೀಡಬಾರದು. ಒಂದು ವೇಳೆ ನೀಡಿದರೆ ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿದು ಅಶೋಕ ಪಟ್ಟಣ ಅವರನ್ನು ಸೋಲಿಸುತ್ತೇನೆ” ಎಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಅರ್ಜುನ ಗಡ್ಡದ್ ತಿಳಿಸಿದರು.

ಇನ್ನಿಬ್ಬರು ಟಿಕೇಟ್ ಆಕಾಂಕ್ಷಿಗಳಾದ ರಾಜೇಂದ್ರ ಪಾಟೀಲ್ ಸಿ.ಬಿ ಪಾಟೀಲ್ ಅವರು ಸಹ “ಅಶೋಕ ಪಟ್ಟಣ ಅವರಿಗೆ ಟಿಕೇಟ್ ನೀಡಬಾರದು ಒಂದು ವೇಳೆ ನೀಡಿದರೆ ನಮ್ಮ ಶರತ್ತುಗಳನ್ನು ಒಪ್ಪಬೇಕು” ಎಂದು ಮನವಿ ಮೂಲಕ ಹೈಕಮಾಂಡ್ ಗೆ ಎಚ್ಚರಿಕೆ ಕರೆ ನೀಡಿದರು.

ವಿವಿಧ ನಿಗಮಗಳಿಂದ ಸಾಲ ಸೌಲಭ್ಯ: ಇಲ್ಲಿದೆ ಲಿಂಕ್

https://pragati.taskdun.com/loan-facility-from-various-corporations-applications-invited/

ಶಿವಮೊಗ್ಗದಲ್ಲಿ ಯುವಕನಿಗೆ ಚಾಕು ಇರಿತ ಕೇಸ್; ಆರೋಪಿಗೆ ಭಯೋತ್ಪಾದಕರ ಲಿಂಕ್

https://pragati.taskdun.com/home-minister-araga-jnanendrareactionstabing-youtinthshivamogga/

Related Articles

Back to top button