ಪ್ರಗತಿವಾಹಿನಿ ಸುದ್ದಿ : ಹಲವು ವರ್ಷಗಳಿಂದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ ಖ್ಯಾತ ಚಲನಚಿತ್ರ ನಿರ್ಮಾಪಕ ಪದ್ಮಶ್ರೀ, ಪದ್ಮಭೂಷಣ ಶ್ಯಾಮ್ ಬೆನೆಗಲ್ (90) ಅವರು ಇಂದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಈ ಕುರಿತು ಅವರ ಪುತ್ರಿ ಪಿಯಾ ಬೆನಗಲ್ ಅವರು ಖಚಿತಪಡಿಸಿದ್ದಾರೆ. ಇತ್ತೀಚೆಗೆ (ಡಿ.15) ರಂದು ಬೆನಗಲ್ ಅವರು ತಮ್ಮ 90ನೇ ವರ್ಷದ ಜನ್ಮದಿನವನ್ನ ಸರಳವಾಗಿ ಆಚರಿಸಿದ್ದರು.ಬೆನಗಲ್ ಅವರನ್ನು ಭಾರತ ಸರ್ಕಾರವು 1976ರಲ್ಲಿ ಪದ್ಮಶ್ರೀ ಮತ್ತು 1991ರಲ್ಲಿ ಪದ್ಮಭೂಷಣ ನೀಡಿ ಗೌರವಿಸಿತ್ತು.
ಸಮೃದ್ಧ ಸಿನಿಮಾ ವೃತ್ತಿಜೀವನದಲ್ಲಿ ಶ್ಯಾಮ್ ಬೆನಗಲ್ ಅವರು ಭಾರತ್ ಏಕ್ ಖೋಜ್ ಮತ್ತು ಸಂವಿಧಾನ್ ಸೇರಿದಂತೆ ವೈವಿಧ್ಯಮಯ ಸಮಸ್ಯೆಗಳು, ಸಾಕ್ಷ್ಯಚಿತ್ರಗಳನ್ನು ಮಾಡಿದವರು. ಅವರ ಚಲನಚಿತ್ರಗಳಲ್ಲಿ ಭೂಮಿಕಾ, ಜುನೂನ್, ಮಂಡಿ, ಸೂರಜ್ ಕಾ ಸತ್ವನ್ ಘೋಡಾ’ ಮಮ್ಮೋ ಮತ್ತು ಸರ್ದಾರಿ ಬೇಗಂ ಸೇರಿವೆ. ಇವು ಹಿಂದಿ ಚಿತ್ರರಂಗದಲ್ಲಿ ಶ್ರೇಷ್ಠವೆಂದು ಪರಿಗಣಿಸಲ್ಪಟ್ಟಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ