Latest

*ಪ್ರೇಕ್ಷಕರ ಮನಗೆದ್ದ ದೀಪ್ತಿ ಗಾಯನ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಲ್ಲೇಶ್ವರಂ 15ನೇ ಅಡ್ಡರಸ್ತೆಯಲ್ಲಿರುವ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಜರುಗುತ್ತಿರುವ ಶ್ರೀ ನರಸಿಂಹ ಜಯಂತಿ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಮೇ 11, ಗುರುವಾರದಂದು ಕು|| ದೀಪ್ತಿ ಮೋಹನ್ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಇವರ ಗಾಯನಕ್ಕೆ ವಾದ್ಯ ಸಹಕಾರದಲ್ಲಿ ವಿದ್ವಾನ್ ಮೈಸೂರು ಸಂಜೀವ್ ಕುಮಾರ್ ಮತ್ತು ವಿದ್ವಾನ್ ಮುರಳಿ ನಾರಾಯಣರಾವ್ ಸಹಕರಿಸಿದರು.

Home add -Advt

ದೀಪ್ತಿ ಹಾಡಿದ ಪ್ರತಿಯೊಂದು ಕೀರ್ತನೆಗಳೂ ನೆರೆದಿದ್ದ ಶ್ರೋತೃಗಳ ಮನಸೆಳೆದಿತ್ತು. ಕಾರ್ಯಕ್ರಮದ ಕೊನೆಯಲ್ಲಿ “ಸಿಂಹರೂಪನಾದ ಶ್ರೀಹರಿ” ಎಂಬ ಕೃತಿಯೊಂದಿಗೆ ಅಂದಿನ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು. ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಪಟ್ಟಾಭಿರಾಮ್ ಅವರು ವಂದನಾರ್ಪಣೆ ಮಾಡಿದರು.

https://pragati.taskdun.com/d-k-shivakumarpressmeetelection-result/

Related Articles

Back to top button