Latest

ನೇಣು ಬಿಗಿದ ಸ್ಥಿತಿಯಲ್ಲಿ ವಕೀಲೆ ಶವ ಪತ್ತೆ

ಪ್ರಗತಿವಾಹಿನಿ ಸುದ್ದಿ; ಮೈಸೂರು: ವಕೀಲೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ರಾಮಕೃಷ್ಣನಗರದಲ್ಲಿ ನಡೆದಿದೆ.

32 ವರ್ಷದ ಚಂದ್ರಕಲಾ ಮೃತ ವಕೀಲೆ. ವೃತ್ತಿಯಲ್ಲಿ ವಕೀಲೆಯಾಗಿದ್ದ ಚಂದ್ರಕಲಾ 2019ರಲ್ಲಿ ರಾಮಕೃಷ್ಣನಗರ ನಿವಾಸಿ ವಿಚ್ಛೇದಿತ ಪ್ರದೀಪ್ ಎಂಬಾತನನ್ನು ವಿವಾಹವಾಗಿದ್ದರು. ಆದರೆ ಇದೀಗ ನೇಣು ಬಿಗಿದ ಸ್ಥಿತಿಯಲ್ಲಿ ಚಂದ್ರಕಲಾ ಶವ ಪತ್ತೆಯಾಗಿದೆ.

Home add -Advt

ಬೆಳಿಗ್ಗೆ ಚಂದ್ರಕಲಾ ತಂದೆ-ತಾಯಿಗೆ ಕರೆ ಮಾಡಿದ ಪ್ರದೀಪ್, ಮಗಳ ಸಾವಿನ ಬಗ್ಗೆ ತಿಳಿಸಿದ್ದಾನೆ. ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೋಷಕರು ಪತಿ ಹಾಗೂ ಮನೆಯವರ ವಿರುದ್ಧ ದೂರು ನೀಡಿದ್ದಾರೆ. ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ, ಪತಿ, ಅತ್ತೆ, ಮಾವ ಸೇರಿ ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎಂದು ಕುವೆಂಪು ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕುಡುಕ ಪತಿ ಕಾಟಕ್ಕೆ ಬೇಸತ್ತ ಪತ್ನಿ; ಗಂಡನನ್ನೇ ಕೊಂದ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ

Related Articles

Back to top button