Latest

*RTI ಕಾರ್ಯಕರ್ತ ರಾಮಕೃಷ್ಣ ಹತ್ಯೆ ಕೇಸ್: ಪ್ರಮುಖ ಆರೋಪಿ PDO ಎಸ್ಕೇಪ್*

ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ಆರ್ ಟಿ ಐ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಗ್ರಾಮ ಪಂಚಾಯಿತಿ ಪಿಡಿಓ 21 ಲಕ್ಷ ರೂಪಾಯಿ ಹಣ ಬಿಡುಗಡೆ ಮಾಡಿಕೊಂಡು ನಾಪತ್ತೆಯಾಗಿರುವ ಘಟನೆ ದಾವಣಗೆರೆಯಲ್ಲಿ ಬೆಳಕಿಗೆ ಬಂದಿದೆ.

ಜನವರಿ 7ರಂದು ಆರ್ ಟಿ ಐ ಕಾರ್ಯಕರ್ತ ರಾಮಕೃಷ್ಣ ಅವರ ಹತ್ಯೆ ನಡೆದಿತ್ತು. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹೊಸಕೆರೆ ಡಾಬಾದಲ್ಲಿ ರಾಮಕೃಷ್ಣ ಅವರನ್ನು ಗ್ಯಾಂಗ್ ವೊಂದು ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿ, ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿತ್ತು. ಹಿರೇಮಲ್ಲನಹೊಳೆ ಗ್ರಾಮ ಪಂಚಾಯತಿ ಪಿಡಿಓ ಎ.ಟಿ.ನಾಗರಾಜ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಎಂದು ಗ್ರಾಮಸ್ಥರು, ಕುಟುಂಬದವರು ಆರೋಪಿಸಿದ್ದರು.

Home add -Advt

ಇದೀಗ ಈ ಪ್ರಕರಣಕ್ಕೆ ಪುಷ್ಠಿ ನೀಡುವಂತೆ ಆರ್ ಟಿ ಐ ಕಾರ್ಯಕರ್ತ ರಾಮಕೃಷ್ಣ ಹತ್ಯೆಯಾದ ಮರುದಿನವೇ ಪಿಡಿಓ ನಾಗರಾಜ್ ನಾಪತ್ತೆಯಾಗಿದ್ದಾರೆ. ಗ್ರಾಮಪಂಚಾಯಿತಿ ಖಾತೆಯಿಂದ 15ನೇ ಹಣಕಾಸು ಯೋಜನೆಯಡಿಯ 21 ಲಕ್ಷ ರೂಪಾಯಿ ಹಣ ಬಿಡುಗಡೆ ಮಾಡಿಕೊಂಡು ಪರಾರಿಯಾಗಿದ್ದಾನೆ. ಇದಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಿವರುದ್ರಮ್ಮ ಸಾಥ್ ನೀಡಿದ್ದಾರೆ ಎಂದು ಗ್ರಾಮ ಪಂಚಾಯತ್ ಸದಸ್ಯರು ಆರೋಪಿಸಿದ್ದಾರೆ.

ಈ ಬಗ್ಗೆ ಜಗಳೂರು ತಹಶೀಲ್ದಾರ್, ಪಂಚಾಯತ್ ರಾಜ್ ಇಲಾಖೆ ಹಾಗೂ ಪೊಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

*ಸ್ಯಾಂಟ್ರೋ ರವಿ ಕೇಸ್; ಆಸ್ತಿ ಜಪ್ತಿಗೆ ಕ್ರಮ: ಸಿಎಂ ಬೊಮ್ಮಾಯಿ*

https://pragati.taskdun.com/santro-ravi-casecm-basavaraj-bommaihome-minister-araga-jnanendra-reaction/

Related Articles

Back to top button