Kannada NewsKarnataka NewsLatest

ಸಮರ್ಥನಂ ಸಂಸ್ಥೆ ವತಿಯಿಂದ ಬಿ.ಎಲ್. ಸಂತೋಷ್ ಗೆ ಸನ್ಮಾನ

 ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಸಮರ್ಥನಂ ಅಂಧರ ಸೇವಾ ಸಂಸ್ಥೆಯ ವತಿಯಿಂದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಅವರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ಸಂಸ್ಥಾಪಕ ಮಹಾಂತೇಶ ಕಿವಡಸಣ್ಣವರ್ ಮತ್ತು ಗೌರವ ನಿರ್ದೇಶಕ ವೀರೇಶ ಕಿವಡಸಣ್ಣವರ್ ನವದೆಹಲಿಯಲ್ಲಿ ಗುರುವಾರ ಸಂತೋಷ ಅವರನ್ನು ಭೇಟಿ ಮಾಡಿ ಸಮರ್ಥನಂ ಸಂಸ್ಥೆಯ ಕುರಿತು ಸಮಗ್ರ ಮಾಹಿತಿ ನೀಡಿದರು.

Home add -Advt

ಸಮರ್ಥನಂ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ಪಡೆದ ಸಂತೋಷ್ ಅತ್ಯಂತ ಸಂತಸ ವ್ಯಕ್ತಪಡಿಸಿದ್ದಲ್ಲದೆ, ತಮ್ಮಿಂದ ಸಂಸ್ಥೆಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದರು.

ಇದೇ ವೇಳೆ ಮಹಾಂತೇಶ ತಮ್ಮ ಬಯೋಗ್ರಫಿಯನ್ನು ಸಂತೋಷ ಅವರಿಗೆ ನೀಡಿ, ಸಮರ್ಥನಂ ಸಂಸ್ಥೆಗೆ ಒಮ್ಮೆ ಭೇಟಿ ನೀಡುವಂತೆ ವಿನಂತಿಸಿದರು.

Related Articles

Back to top button