NationalPolitics

*ರಾಹುಲ್ ಗಾಂಧಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಶಿವಸೇನಾ ಶಾಸಕ*

ಪ್ರಗತಿವಾಹಿನಿ ಸುದ್ದಿ: ಮೀಸಲಾತಿ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿರುವ ಹೇಳಿಕೆಯಿಂದ ಕಾಂಗ್ರೆಸ್ ನ ಅಸಲಿ ಮುಖ ಬಯಲಾಗಿದೆ ಎಂದು ಶಿವಸೇನಾ ಶಾಸಕ ಸಂಜಯ್ ಗಾಯಕ್ವಾಡ್ ಕಿಡಿಕಾರಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಸಂವಿಧಾನಕ್ಕೆ ಅಪಾಯವಿದೆ, ಬಿಜೆಪಿಯವರು ಸಂವಿಧಾನ ಬದಲಿಸುತ್ತಾರೆ ಎಂದು ಸುಳ್ಳು ಹೇಳಿ ಮತ ಪಡೆದು ಇಂದು ಅಮೆರಿಕಾದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಮೀಸಲಾತಿಯನ್ನು ಕೊನೆಗಾಣಿಸುತ್ತೇವೆ ಎನ್ನುವ ಮಾತುಗಳು ರಾಹುಲ್ ಗಾಂಧಿಯವರ ಬಾಯಿಯಲ್ಲಿ ಬಂದಿದೆ. ಹೀಗೆ ಮಾತನಾಡಿದ ಅವರ ನಾಲಿಗೆಯನ್ನು ಯಾರು ಕತ್ತರಿಸುತ್ತಾರೋ ಅವರಿಗೆ 11 ಲಕ್ಷ ರೂ ಬಹುಮಾನ ನೀಡಲಾಗುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸಂಜಯ್ ಗಾಯಕ್ವಾಡ್ ಗೆ ವಿವಾದಗಳು ಹೊಸದಲ್ಲ, ಕಳೆದ ತಿಂಗಳು ಪೊಲೀಸರು ಅವರ ಕಾರು ತೊಳೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

Home add -Advt

Related Articles

Back to top button