Latest

*ವೋಟರ್ ಐಡಿ ಸಂಗ್ರಹಿಸಿ ಹಣಕ್ಕೆ ಆಮಿಷ; ನಾಲ್ವರ ಬಂಧನ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರಿನಲ್ಲಿ ವೋಟರ್ ಐಡಿ ಸಂಗ್ರಹಿಸುತ್ತಿದ್ದ ನಾಲ್ವರನ್ನು ಫ್ಲೈಯಿಂಗ್ ಸ್ಕ್ವಾಡ್ ಹಾಗೂ ಭಾರತಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶಿವಾಜಿನಗರ ಕ್ಷೇತ್ರದಲ್ಲಿ ನಾಲ್ವರು ವೊಟರ್ ಐಡಿ ಸಂಗ್ರಹಿಸುತ್ತಿದ್ದರು. ಹಣ ನೀಡುವುದಾಗಿ ಹೇಳಿ ಆಮಿಷವೊಡ್ಡಿ ಮನೆ ಮನೆಗೆ ತೆರಳಿ ವೋಟರ್ ಐಡಿ ಸಂಗ್ರಹಿಸುತ್ತಿದ್ದರು ಎನ್ನಲಾಗಿದೆ.

ಒಂದು ವೋಟ್ ಗೆ 2 ಸಾವಿರ ರೂಪಾಯಿ ಹಣ ನೀಡುವುದಾಗಿ ವೋಟರ್ ಐಡಿ ಸಂಗ್ರಹಿಸುತ್ತಿದ್ದರು. ಶಿವಾಜಿನಗರ ಕಾಂಗ್ರೆಸ್ ಕಾರ್ಯಕರ್ತರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

https://pragati.taskdun.com/b-s-yedyurappaministerslokayukta-complaintcovid-scame/

Related Articles

Back to top button