Belagavi NewsBelgaum NewsKannada NewsKarnataka NewsLatest

*ಬೆಳಗಾವಿ: ತಮ್ಮನನ್ನೆ ಕೊಲೆ ಮಾಡಿದ್ದ ಅಣ್ಣ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸ್ವಂತ ತಮ್ಮನನ್ನೇ ಕೊಲೆ ಮಾಡಿ ಅಪಘಾತದಲ್ಲಿ ಸಾವು ಎಂದು ಬಿಂಬಿಸಿದ್ದ ಅಣ್ಣನನ್ನು ಬೆಳಗಾವಿ ಜಿಲ್ಲೆಯ ಸವದತ್ತಿ ಪೊಲೀಸರು ಬಂಧಿಸಿದ್ದಾರೆ.

ಆಸ್ತಿ ಆಸೆಗಾಗಿ ಅಣ್ಣ ಸಿದ್ದಪ್ಪ ಅಳಗೋಡಿ ಮನೆ ಕೆಲಸದವನ ಜೊತೆ ಸೇರಿ ತಮ್ಮ ಮಹಾಂತೇಶ್ ಅಳಗೋಡಿಯನ್ನು ಹತ್ಯೆ ಮಾಡಿದ್ದ. ಪ್ರಕರಣ ಸಂಬಂಧ ಸವದತ್ತಿ ಪೊಲೀಸರು ಆರೋಪಿಗಳಾದ ಸಿದ್ದಪ್ಪ ಹಾಗೂ ಬಾಬು ಲಮಾಣಿಯನ್ನು ಬಂಧಿಸಿದ್ದಾರೆ.

Home add -Advt

ಸವದತ್ತಿ ತಾಲೂಕಿನ ಗೊರವನಕೊಳ್ಳ ಗ್ರಾಮದಲ್ಲಿ ಈ ದುರಂತ ನಡೆದಿತ್ತು. ಅಣ್ಣ ಸಿದ್ದಪ್ಪ ಅಳಗೋಡಿ ಬಾಬು ಲಮಾಣಿ ಮೂಲಕ ತಮ್ಮ ಮಹಂತೇಶ್ ಅಳಗೋಡಿಯನ್ನು ಕರೆದು ಕಂಥಪೂರ್ತಿ ಕುಡಿಸಿ ಬಳಿಕ ಟವೆಲ್ ನಿಂದ ಕತ್ತು ಬಿಗಿದು ಕೊಲೆ ಮಾಡಿದ್ದ. ಬಳಿಕ ಮೃತದೇಹವನ್ನು ಕಾಲುವೆ ಬಳಿ ಎಸೆದು ಬೈಕ್ ಬೀಳಿಸಿ ಅಪಘಾತದಲ್ಲಿ ಸಾವು ಎಂದು ದೂರು ನೀಡಿದ್ದ.

ಶವದ ಕತ್ತಿನಲ್ಲಿದ್ದ ಕಲೆ ಕಂಡು ಅನುಮಾನಗೊಂದ ಪೊಲೀಸರಿಗೆ ಮರಣೋತ್ತರ ಪರೀಕ್ಷೆಯಲ್ಲಿ ಇದು ಅಪಘಾತವಲ್ಲ ಕೊಲೆ ಎಂಬುದು ಸಾಬೀತಾಗಿದೆ. ಕೆಲಸದಾತ ಬಾಬು ಲಮಾಣಿಯನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ವಿಚಾರ ಬಾಯ್ಬಿಟ್ಟಿದ್ದಾನೆ. ಸಧ್ಯ ಮೃತನ ಅಣ್ಣ ಸಿದ್ದಪ್ಪನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆಸ್ತಿಗಾಗಿ ತಮ್ಮನನ್ನೇ ಕೊಲೆ ಮಾಡಿದ್ದಾಗಿ ತಿಳಿಸಿದ್ದಾನೆ.


Related Articles

Back to top button