Kannada NewsKarnataka NewsLatest

*ರೂಟ್ ಮಾರ್ಚ್ ನಡೆಸಿದ ಬೆಳಗಾವಿ ನಗರ ಪೊಲೀಸರು*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ನಗರದಲ್ಲಿ ಸಾರ್ವಜನಿಕ ಶ್ರೀ ಗಣೇಶ ಚತುರ್ಥಿಹಬ್ಬದ ಅಂಗವಾಗಿ ಹಾಗೂ ಕಾನೂನು ಸುವವ್ಯವಸ್ಥೆ ಕಾಪಾಡಲು ರ್ಯಾಪಿಡ್ ಆ್ಯಕ್ಷನ್ ಫೋರ್ಸ್ (ಆರ್‌ಎಎಫ್) ಮತ್ತು ಸ್ಥಳೀಯ ಪೊಲೀಸ್ ರಿಂದ  ಪಥಸಂಚಲನ (ರೂಟ್ ಮಾರ್ಚ) ಕೈಗೊಳ್ಳಲಾಯಿತು.

ಈ ಪಥಸಂಚನಲವು ಚನ್ನಮ್ಮ ವೃತ್ತದಿಂದ ಪ್ರಾರಂಭವಾಗಿ ಚವಾಟಗಲ್ಲಿ, ಶೆಟ್ಟಿ ಗಲ್ಲಿ, ಶಾಸ್ತ್ರಿ ಚೌಕ, ದರ್ಬಾರ ಗಲ್ಲಿ, ಖಡೇಬಜಾರ, ಜಾಲಗಾರ ಗಲ್ಲಿ, ಖಡಕ ಗಲ್ಲಿ ಮೂಲಕ ಮಾರ್ಕೆಟ್ ಪೊಲೀಸ್ ಠಾಣೆ ಬಳಿ ಮುಕ್ತಾಯಗೊಂಡಿತು.

Home add -Advt

ಬೆಳಗಾವಿ ನಗರದ ಸಾರ್ವಜನಿಕರು ಗಣೇಶ ಚತುರ್ಥಿಯ ಹಬ್ಬದ ಆಚರಣೆ ಕಾಲಕ್ಕೆ ಎಲ್ಲರೂ ಶಾಂತ ರೀತಿಯಿಂದ ಹಾಗೂ ಯಾವುದೇ ಕೋಮಿನ ಜನರ ಭಾವನೆಗಳಿಗೆ ದಕ್ಕೆ ಆಗದಂತೆ ಹಾಗೂ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸಿಕೊಂಡು ಬರುಬೇಕು. ಇದರೊಂದಿಗೆ ಎಲ್ಲ ನಿಯಮಗಳನ್ನು ಪಾಲಿಸಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಬರುವಲ್ಲಿ ಪೊಲೀಸ್ ಇಲಾಖೆಗೆ ಸಹಕರಿಸುವಂತೆ ನಗರ ಪೊಲೀಸ್ ಆಯುಕ್ತ  ಭೂಷಣ ಬೊರಸೆ ಮನವಿ ಮಾಡಿದ್ದಾರೆ. 

Related Articles

Back to top button