ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಸೆಲ್ಫಿ ಹುಚ್ಚು ಏನೆಲ್ಲ ಅನಾಹುತಗಳನ್ನು ತಂದೊಡ್ಡುತ್ತೆ ನೋಡಿ. ಯುವಕನೊಬ್ಬ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಪಿಸ್ತೂಲಿನಿಂದ ಆಕಸ್ಮಿಕವಾಗಿ ಹಾರಿದ ಗುಂಡುಗೆ ಆತನೇ ಬಲಿಯಾಗಿರುವ ಘಟನೆ ಗ್ರೇಟರ್ ನೊಯ್ಡಾದಲ್ಲಿ ನಡೆದಿದೆ.
22 ವರ್ಷದ ಸೌರಭ್ ಮಾವಿ ಮೃತ ಯುವಕ. ಪಿಸ್ತೂಲು ತೆಗೆದುಕೊಂಡು ಸೆಲ್ಫಿಗೆ ಪೋಸ್ ನೀಡುವ ಸಂದರ್ಭದಲ್ಲಿ ಪಿಸ್ತೂಲಿನಿಂದ ಹಾರಿದ ಗುಂಡು ಸೌರಭ್ ಎದೆಗೆ ತಗುಲಿದೆ.
ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸೌರಭ್ ಮೃತಪಟ್ಟಿದ್ದಾನೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ