ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಟಿಪ್ಪು ಕಾಲದಿಂದ ಬಂದಿದ್ದ ದೇವಾಲಯಗಳಲ್ಲಿ ಸಲಾಂ ಮಂಗಳಾರತಿಗೆ ಧಾರ್ಮಿಕ ಪರಿಷತ್ ಬ್ರೇಕ್ ವಿಚಾರವಾಗಿ ಸ್ಪಷ್ಟನೆ ನೀಡಿರುವ ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ, ರಾಜ್ಯದ ಯಾವುದೇ ದೇವಾಲಯಗಳಲ್ಲಿ ಆರತಿ ಪದ್ಧತಿ ರದ್ದಾಗಿಲ್ಲ ಎಂದು ತಿಳಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಡಿದ ಸಚಿವರು, ಸಲಾಂ ಮಂಗಳಾರತಿ ಹೆಸರಿನಲ್ಲಿ ಮಾತ್ರ ಬದಲಾವಣೆ ಮಾಡುವ ಚಿಂತನೆ ನಡೆದಿದೆ. ಧಾರ್ಮಿಕ ಪರಿಷತ್ ಗೆ ಕೆಲವು ಅಧಿಕಾರಗಳಿವೆ. ಈ ನಿಟ್ಟಿನಲ್ಲಿ ಧಾರ್ಮಿಕ ಪರಿಷತ್ ಇಲಾಖೆಗೆ ಮನವಿ ಮಾಡಿದೆ. ಸಲಾಂ ಎಂಬುದು ಸಂಸ್ಕೃತ ಪದವಲ್ಲ, ಸಲಾಂ ಬದಲಾಗಿ ಸಂಸ್ಕೃತ ಹೆಸರಿರಬೇಕು ಎಂದು ಹೇಳಿದೆ. ಧಾರ್ಮಿಕ ಪರಿಷತ್ ಮನವಿಗೆ ಸ್ಪಂದಿಸಿದ್ದೇವೆ. ಆದರೆ ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ.
ಮುಜರಾಯಿ ಇಲಾಖೆ ಅಧಿಕಾರಿಗಳು, ಇತಿಹಾಸಕಾರರ ಜೊತೆ ಸಮಾಲೋಚನೆ ಬಳಿಕ ಸಿಎಂ ಬೊಮ್ಮಾಯಿ ಅವರೊಂದಿಗೆ ಚರ್ಚಿಸಲಾಗುವುದು. ಬಳಿಕ ಸರ್ಕಾರದ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಸಲಾಂ ಆರತಿ ಬದಲಿಗೆ ’ಆರತಿ ನಮಸ್ಕಾರ’, ದೀವಟಿಗೆ ಸಲಾಂ ಬದಲಿಗೆ ‘ಮಂಗಳಾರತಿ ನಮಸ್ಕಾರ’ ಎಂದು ಹೆಸರು ಬದಲಿಸಲು ಚಿಂತನೆ ನಡೆದಿದೆ. ಈ ಬಗ್ಗೆ ಅಂತಿಮ ನಿರ್ಧಾರದ ಬಳಿಕ ಸುತ್ತೋಲೆ ಹೊರಡಿಸಲಾಗುವುದು ಎಂದು ಹೇಳಿದರು.
*ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ; ಕಾಮುಕ ಶಿಕ್ಷಕನ ವಿರುದ್ಧ ಶಿಕ್ಷಣ ಇಲಾಖೆಗೆ ಪತ್ರ ಬರೆದ ವಿದ್ಯಾರ್ಥಿನಿಯರು*
https://pragati.taskdun.com/mandya-govt-schoolteachersexual-harrasmentstudentscomplaint/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ