Karnataka NewsUncategorized

*ಅಭಿವೃದ್ಧಿ ಕಾಮಗಾರಿಗಳಿಂದಾಗಿ ಜನರ ಆಶೀರ್ವಾದ ನನ್ನ ಮೇಲಿದೆ: ಸಚಿವೆ ಶಶಿಕಲಾ ಜೊಲ್ಲೆ*

ಪ್ರಗತಿವಾಹಿನಿ ಸುದ್ದಿ; ನಿಪ್ಪಾಣಿ: ‘ವಿವಿಧ ಶಾಶ್ವತ ಕಾಮಗಾರಿಗಳ ಸಹಿತ ಬೋರಗಾವ ಪಟ್ಟಣದಲ್ಲಿ ಸುಮಾರು 101 ಕೋಟಿ ರೂ. ಅಭಿವೃಧ್ಧಿ ಕಾಮಗಾರಿಗಳನ್ನು ಹಮ್ಮಿಕೊಂಡಿದ್ದೇನೆ. ಪಟ್ಟಣದಲ್ಲಿ ನಡೆದ ಎಲ್ಲ ಶಾಶ್ವತ ಕಾಮಗಾರಿಗಳು ನನ್ನ ಆಡಳಿತಾವಧಿಯಲ್ಲಿಯೇ ಆಗಿವೆ. ಪಟ್ಟಣದ ಜನತೆಗೆ ಇದು ಗೊತ್ತಿದ್ದು ಅವರು ಚುನಾವಣೆಯಲ್ಲಿ ನನ್ನನ್ನೆ ಆಶೀರ್ವದಿಸಲಿದ್ದಾರೆ’ ಎಂದು ಸ್ಥಳೀಯ ಮತಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ತಾಲೂಕಿನ ಬೋರಗಾವ ಪಟ್ಟಣದಲ್ಲಿ ಶನಿವಾರ ಆಯೋಜಿಸಿದ ವಿಧಾನಸಭೆ ಚುನಾವಣೆಯ ಪ್ರಚಾರದ ಅಂಗವಾಗಿ ಆಯೋಜಿಸಿದ ರ‍್ಯಾಲಿಯಲ್ಲಿನ್ನುದ್ದೇಶಿಸಿ ಅವರು ಮಾತನಾಡಿದರು. ‘ಜೈನ ಧರ್ಮ ಬಾಂಧವರ ಪವಿತ್ರ ತೀರ್ಥಸ್ಥಳವಾದ ಸಮ್ಮೆದ ಶಿಖರಜಿ ಬಳಿ ಯಾತ್ರಿ ನಿವಾಸದ ಕಾರ್ಯ ಪ್ರಗತಿಯಲ್ಲಿದೆ. ಅನೇಕ-ದೇಗುಲ-ಮಶೀದಿಗಳಿಗೆ ಕೋಟ್ಯಂತರ ರೂಪಾಯಿಗಳ ಅನುದಾನ ವಿತರಿಸಲಾಗಿದೆ. ಕೇವಲ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಲ್ಲದೆ ಕ್ಷೇತ್ರದಲ್ಲಿ ಎಲ್ಲ ಹಂತದಲ್ಲಿ ಅಭಿವೃದ್ಧಿ ಮಾಡಿ, ಸಾಮಾಜಿಕ, ಧಾರ್ಮಿಕ, ಮೊದಲಾದ ಕ್ಷೇತ್ರಗಳಲ್ಲಿಯೂ ಅಪಾರ ಶ್ರಮಿಸಿದ್ದೇನೆ. ಕರೊನಾ ಕಾಲದಲ್ಲಿ ನಾನೂ ಕರೊನಾ ಪಾಜಿಟಿವ್ ಆದಾಗ ಬೇರೆಡೆ ಯಾವುದೇ ಹೈಟೆಕ್ ಆಸ್ಪತ್ರೆಗೆ ಹೋಗದೆ ಜೊಲ್ಲೆ ಗ್ರುಪ್‌ದಿಂದ ಸ್ಥಾಪಿಸಲ್ಪಟ್ಟ ಆರೈಕೆ ಕೇಂದ್ರದಲ್ಲಿಯೇ ಚಿಕಿತ್ಸೆ ಪಡೆದಿದ್ದೇನೆ. ನುಡಿದಂತೆ ನಡೆದಿದ್ದೇನೆ, ಯಾರ ಮೇಲೆ ಅನ್ಯಾಯ ಮಾಡಿಲ್ಲ. ಅದಕ್ಕೆ ನನ್ನ ಗೆಲುವು ನಿಶ್ಚಿತ. ಆದರೆ ದಾಖಲೆ ಮತಗಳಿಂದ ಗೆಲ್ಲಿಸಿ’ ಎಂದು ಮನವಿ ಮಾಡಿದರು.

ಪಟ್ಟಣ ಪಂಚಾಯಿತಿ ಸದಸ್ಯ ಶರದ ಜಂಗಟೆ ಮಾತನಾಡಿದರು. ಈ ಸಂದರ್ಭದಲ್ಲಿ ಸುನೀಲ ಪಾಟೀಲ, ರಮೇಶ ಪಾಟೀಲ, ಬಾಬಾಸಾಹೇಬ ಚೌಗುಲೆ, ಶಿವಾಜಿ ಭೋರೆ, ಫಿರೋಜ್ ಅಪರಾಜ, ದೇವ ಮಾಳಿ, ಜಮೀಲ ಅತ್ತಾರ, ಪ್ರಕಾಶ ಮಾಲಗಾವೆ, ಮಹಾವೀರ ಪಾಟೀಲ, ಅಜಿತ ಕಡೊಲೆ, ಭರಮಾ ಕುಡಚೆ, ಪ್ರಶಾಂತ ತಳವಾರ, ಅಣ್ಣಸಾಹೇಬ ಡಕರೆ, ಮಹಿಪತಿ ಖೋತ, ಭರತ ಜಂಗಟೆ, ಶಾಂತು ಪತ್ರಾವಳೆ, ಅಜಿತ ತೇರದಾಳೆ, ವಿಷ್ಣು ತೋಡಕರ, ಸಂಜು ಮಹಾಜನ, ರಾಣಿ ಬೇವಿನಕಟ್ಟಿ, ಬಿಸ್ಮಿಲ್ಲಾ ಅಪರಾಜ, ಮೀನಾಕ್ಷಿ ಭಾದುಲೆ, ಅರ್ಚನಾ ಭಾದುಲೆ, ದೀಪಾಲಿ ಕುಂಭಾರ, ಮೊದಲಾದವರು ಸೇರಿದಂತೆ ಸಾವಿರಾರು ಜನರು ನ ನೆರೆದಿದ್ದರು. ರ‍್ಯಾಲಿ ವಿಶೇಷತೆ: ರ‍್ಯಾಲಿಯಲ್ಲಿ ಇಡಿ ಬೋರಗಾವ ಪಟ್ಟಣವೇ ನೆರೆದಂತೆ ಕಾಣುತ್ತಿತ್ತು. ಕೇವಲ ಬೋರಗಾವದಂತಹ ಒಂದೆ ಪಟ್ಟಣದಲ್ಲಿ ಸಾವಿರಾರು ಜನರ ರ‍್ಯಾಲಿಯು ನಾನು ಮಾಡಿದ ಅಭಿವೃಧ್ಧಿ ಕಾಮಗಾರಿಗಳಿಗೆ ರಸೀದಿಯಾಗಿದೆ ಎಂದೆನಿಸುತ್ತಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

https://pragati.taskdun.com/s-m-krishnasistersunitahouseit-raid/


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button