Latest

ತಾಲಿಬಾನ್ ಉಗ್ರರ ನೆಲೆಗಳ ಮೇಲೆ ವಾಯುದಾಳಿ; 254 ಉಗ್ರರ ಹತ್ಯೆ

ಪ್ರಗತಿವಾಹಿನಿ ಸುದ್ದಿ; ಕಂದಹಾರ್: ಅಪ್ಘಾನಿಸ್ತಾನ ರಕ್ಷಣಾ ಪಡೆಗಳು ತಾಲಿಬಾನ್ ಉಗ್ರರ ನೆಲೆಗಳ ಮೇಲೆ ವಾಯುದಾಳಿ ನಡೆಸಿದ್ದು, ತಾಲಿಬಾನ್ ಉಗ್ರರ ಒಟ್ಟು 13 ನೆಗಳ ಮೇಲೆ ಏರ್ ಸ್ಟ್ರೈಕ್ ನಡೆಸಿ, 254 ಉಗ್ರರನ್ನು ಸದೆಬಡಿದಿವೆ.

ಕಂದಹಾರ್ ಏರ್ ಪೋರ್ಟ್ ಮೇಲೆ ತಡರಾತ್ರಿ ತಾಲಿಬಾನ್ ಉಗ್ರರು ಮೂರು ರಾಕೇಟ್ ದಾಳಿ ನಡೆಸಿದ್ದರು. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ. ಇದರ ಬೆನ್ನಲ್ಲೇ ಇಂದು ಅಪ್ಘಾನಿಸ್ತಾನ ರಕ್ಷಣಾ ಪಡೆಗಳು ತಾಲಿಬಾನ್ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿವೆ. ದಾಳಿಯಲ್ಲಿ 254 ಉಗ್ರರನ್ನು ಹತ್ಯೆಗೈಯ್ಯಲಾಗಿದ್ದು, 97 ಉಗ್ರರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಬೃಹತ್ ವೇಶ್ಯಾವಾಟಿಕೆ ಜಾಲ ಪೊಲೀಸ್ ಬಲೆಗೆ; 12 ಹೋಟೆಲ್, 11 ಸ್ಪಾಗಳ ಮೇಲೆ ದಾಳಿ

Related Articles

Back to top button