Kannada NewsKarnataka NewsLatest

*ಶಿವಮೊಗ್ಗದಲ್ಲಿ ಮಾರಾಮಾರಿ; ಐವರಿಗೆ ಚಾಕು ಇರಿತ*

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಹಳೆ ವೈಷಮ್ಯದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಐವರಿಗೆ ಚಾಕು ಇರಿದ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.

ಶಿವಮೊಗ್ಗದ ದ್ರೌಪದಮ್ಮ ಸರ್ಕಲ್ ನಲ್ಲಿ ಸೆ.21ರ ತಡರಾತ್ರಿ ಮಾರಾಮಾರಿ ನಡೆದಿದ್ದು, ಘಟನೆಯಲ್ಲಿ ಐವರಿಗೆ ಚಾಕು ಇರಿಯಲಾಗಿದೆ. ಪವನ್ ಹಾಗೂ ಕಿರಣ್ ಎಂಬುವವರ ಗುಂಪಿನ ನಡುವೆ ಗಲಾಟೆಯಾಗಿದೆ.

Home add -Advt

ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button