Latest

ಶಿಕಾರಿಪುರದಲ್ಲಿ ಭೂಕಂಪ; ಭಾರಿ ಸದ್ದಿನೊಂದಿಗೆ ಕಂಪಿಸಿದ ಭೂಮಿ

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿ ಭೂಕಂಪ ಸಂಭವಿಸಿದ್ದು, ಜನರು ಭಯಭೀತರಾಗಿದ್ದಾರೆ.

ಶಿಕಾರಿಪುರದ ಶಿರಾಳಕೊಪ್ಪ ಪಟ್ಟಣದಲ್ಲಿ ಭೂಮಿ ಕಂಪಿಸಿದ್ದು, ಪಟ್ಟಣದ 3 ಕೀ.ಮೀ ವ್ಯಾಪ್ತಿಯಲ್ಲಿ ಇಂದು ಮುಂಜಾನೆ 3.55ರ ಸುಮಾರಿಗೆ ಭೂಕಂಪವಾಗಿದೆ.

Home add -Advt

ಭೂಕಂಪನದ ಜೊತೆ ಭೂಮಿಯೊಳಗಿಂದ ಭಾರಿ ಶಬ್ಧ ಕೇಳಿಬಂದಿದ್ದು, ಜಿಲ್ಲೆಯಲ್ಲಿ ಜನರು ಆತಂಕಕ್ಕೀಡಾಗಿದ್ದಾರೆ.

ಈ ನಡುವೆ ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪವಾಗಿದ್ದು, ಭಾರಿ ಸ್ಫೋಟದ ಸದ್ದಿನಿಂದಿಗೆ ಭೂಮಿ ಕಂಪಿಸಿದೆ. ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.5ರಷ್ಟು ದಾಖಲಾಗಿದೆ.

ವಿಜಯಪುರ ಬಳಿಯ ಅಲಿಯಾಬಾದ್ ನಲ್ಲಿ ಭೂಕಂಪನ ಕೇಂದ್ರ ಪತ್ತೆಯಾಗಿದೆ. ವಿಜಯಪುರದಲ್ಲಿ ಪದೇ ಪದೇ ಭೂಕಂಪನ ಸಂಭಸುತ್ತಿರುವ ಬೆನ್ನಲ್ಲೇ ಇದೀಗ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿಯೂ ಭೂಕಂಪನವುಂಟಾಗಿದ್ದು ಆತಂಕಕ್ಕೆ ಕಾರಣವಾಗಿದೆ.

ಎರಡು ಬಸ್ ಗಳ ನಡುವೆ ಭೀಕರ ಅಪಘಾತ; 9 ಪ್ರಯಾಣಿಕರು ದುರ್ಮರಣ

https://pragati.taskdun.com/latest/9-killed-38-injured-tourist-bustransport-bus-accidentkerala/

Related Articles

Back to top button