Latest

ಮುಂದುವರೆದ ಶಿವಸೇನೆ ಪುಂಡಾಟ; ಕನ್ನಡಿಗರ ಮನೆಗೆ ನುಗ್ಗಿ ಥಳಿಸಿದ ಪುಂಡರು

ಪ್ರಗತಿವಾಹಿನಿ ಸುದ್ದಿ; ಮುಂಬೈ: ಶಿವಸೇನೆ ಹಾಗೂ ಎಂಇಎಸ್ ಪುಂಡರ ಹಾವಳಿ ಮುಂದುವರೆದಿದೆ. ಮಹಾರಾಷ್ಟ್ರದಲ್ಲಿ ಕನ್ನಡಿಗರ ಮನೆಗಳಿಗೆ ತೆರಳಿ ಶಿವಸೇನೆ ಕಾರ್ಯಕರ್ತರು ಬೆದರಿಕೆಯೊಡ್ಡಿ, ಹಲ್ಲೆ ನಡೆಸುತ್ತಿದ್ದಾರೆ.

50ಕ್ಕೂ ಹೆಚ್ಚು ಶಿವಸೇನೆ ಕಾರ್ಯಕರ್ತರು ಮರಾಠಿಯಲ್ಲಿ ನಿಂದಿಸುತ್ತಾ, ಕ್ಷಮೆಯಾಚಿಸುವಂತೆ ಕನ್ನಡಿಗರಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಸರ್ವ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಶಿವಕುಮಾರ್ ನಾಯಕ್ ಗೆ ಕೊರಳಪಟ್ಟಿ ಹಿಡಿದು ಥಳಿಸಿದ್ದಾರೆ. ಇದನ್ನು ಶಿವಸೇನೆಯ ಇನ್ನೋರ್ವ ಕಾರ್ಯಕರ್ತ ವಿಡಿಯೋ ಚಿತ್ರವನ್ನು ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Home add -Advt

ಕರ್ನಾಟಕ-ಮಹಾರಾಷ್ಟ್ರ ನಡುವೆಸಾಮರಸ್ಯ ಬೆಳೆಯಲಿ ಎಂದು ಮಹಾರಾಷ್ಟ್ರದಲ್ಲಿರುವ ಬಸವಣ್ಣನ ಪುತ್ಥಳಿಗೆ ಪೂಜೆ ಮಾಡಿದ್ದ ಶಿವಕುಮಾರ್ ನಾಯಕ್, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಭೇಟಿಗೆ ಮುಂದಾಗಿದ್ದರು. ನಾಲ್ಕುದಿನಗಳಿಂದ ಶಿವಕುಮಾರ್ ಅವರನ್ನು ಗಮನಿಸಿದ್ದ ಶಿವಸೇನೆ ಕಾರ್ಯಕರ್ತರು ತಡ ರಾತ್ರಿ 3 ಗಂಟೆ ಸುಮಾರಿಗೆ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ.
ಹಲಸಿ ಪ್ರಕರಣ : ರಾತ್ರೋ ರಾತ್ರಿ ಮೂವರ ಬಂಧನ

Related Articles

Back to top button