Belagavi NewsBelgaum NewsKannada NewsKarnataka NewsLatest

*ಸಿದ್ದರಾಮೇಶ್ವರರ ಅಹಿಂಸೆ ಸಮಾನತೆ ತತ್ವಗಳನ್ನು ಪಾಲಿಸಬೇಕು: ಡಾ. ರಾಜಶೇಖರ ಬಿರಾದಾರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯಕ್ತ ಆಶ್ರಯದಲ್ಲಿ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಮಂಗಳವಾರ (ಜ.20) ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ ನಡೆಯಿತು.

ಶಿವಯೋಗಿ ಸಿದ್ದರಾಮೇಶ್ವರ ರವರು ಮೂಲತಃ ಮಹಾರಾಷ್ಟ್ರದ ಸೊಲ್ಲಾಪುರ ಭಾಗದವರು ಇವರು ಸಾಕಷ್ಟು ವಚನಗಳನ್ನು ರಚಿಸಿದ್ದು, ಎರಡು ಸಾವಿರ ವಚನಗಳು ಲಭ್ಯವಿವೆ. ಆಧ್ಯಾತ್ಮಿಕತೆಯಡೆ ಹೆಚ್ಚಿನ ವಲವು ನೀಡಿದ ಇವರು ಪ್ರತಿಯೊಂದು ಜೀವಿಯಲ್ಲಿ ದೇವರನ್ನು ಕಾಣಬೇಕು. ಅಹಿಂಸೆ ಸಮಾನತೆ ಕಾಯಕ ನಿಸ್ವಾರ್ಥ ಬದುಕುಗಳನ್ನು ತಮ್ಮ ತತ್ವಗಳನ್ನಾಗಿಸಿದರು ಎಂದು ಯರಗಟ್ಟಿ ಸಿ.ಎಂ ಮಾಮನಿ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ರಾಜಶೇಖರ ಬಿರಾದಾರ ಅವರು ತಿಳಿಸಿದರು.

ಸೋಲ್ಲಾಪೂರ ಭಾಗಗಳಲ್ಲಿ ಕೇರೆ ಬಾವಿ ಮಠ ದೇವಾಲಯಗಳನ್ನು ನೀರ್ಮಿಸಿದರು. ತಮ್ಮ ಜೀವಮಾನವೀಡಿ ಲೋಕೋಪಯೋಗಿ ಕಾರ್ಯಗಳನ್ನು ಕೈಗೊಂಡಿದ್ದರು. ಉತ್ತಮ ಜೀವನಕಾಗಿ ಪ್ರತಿಯೊಬ್ಬರು ಇವರ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ರಾಜಶೇಖರ ಬಿರಾದಾರ ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೋನಕೆರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಜಿಲ್ಲಾ ಭೋವಿ ವಡ್ಡರ ಸಮಾಜದ ಗೌವರವಾಧ್ಯಕ್ಷರಾದ ಕೆ. ಎಸ್ ಮಮದಾಪುರ, ಅಧ್ಯಕ್ಷ ಲಕ್ಷ್ಮಣ ಗಾಡಿವಡ್ಡರ ಹಾಗೂ, ಸಮಾಜದ ಮುಖಂಡರಾದ ಆರ್. ಚಿ ಬಂಡಿವಡ್ಡರ, ಲಕ್ಷ್ಮಣ, ಬಾಬು ಕಾಗಲಕರ ಉಪಸ್ಥಿತರಿದ್ದರು.

Home add -Advt

Related Articles

Back to top button